Friday, June 5, 2026
Homeತಾಜಾ ಸುದ್ದಿಸುರತ್ಕಲ್ ಟೋಲ್‌ಗೇಟ್ 15 ದಿನಗಳೊಳಗೆ ತೆರವು: ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ

ಸುರತ್ಕಲ್ ಟೋಲ್‌ಗೇಟ್ 15 ದಿನಗಳೊಳಗೆ ತೆರವು: ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ

- Advertisement -
- Advertisement -

ಸುರತ್ಕಲ್: 15 ದಿನಗಳೊಳಗೆ ಸುರತ್ಕಲ್ ನ ಟೋಲ್ ಗೇಟ್ ತೆರವುಗೊಳಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಟ್ರಕ್ ಮಾಲಕರ ಸಂಘದ ಅಧ್ಯಕ್ಷ ಸುನೀಲ್ ಡಿ’ಸೋಜಾ ಅವರು ತಿಳಿಸಿದ್ದಾರೆ.

ಕೂಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಮ್ಮ ಸಂಘದ ರಾಜ್ಯಾಧ್ಯಕ್ಷ ಡಾ| ಜಿ.ಆರ್.ಷಣ್ಮುಗಪ್ಪ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸೆ. 9ರಂದು ಟ್ರಾನ್ಸ್ ಪೋರ್ಟ್ ಮೀಟ್ ಸಭೆಯ ಬಳಿಕ ಭೇಟಿ ಮಾಡಿ ಟೋಲ್ ಗೇಟ್ ತೆರವು ಬಗ್ಗೆ ಮನವಿ ನೀಡಿದ್ದರು. ಇದಕ್ಕೆ ಸಚಿವರಿಂದ ಭರವಸೆ ದೊರಕಿವೆ. ಸರಕಾರ ಮಾತು ತಪ್ಪಿದಲ್ಲಿ ಟ್ರಕ್‌ಗಳ ಮೂಲಕ ಟೋಲ್ ಗೇಟ್‌ ಗೆ ಮುತ್ತಿಗೆ ಹಾಕುತ್ತೇವೆ ಎಂದರು.

- Advertisement -

Latest News

error: Content is protected !!