Sunday, May 5, 2024
Homeತಾಜಾ ಸುದ್ದಿಅಂತಿಮ ವರ್ಷದ 'ಪದವಿ ಪರೀಕ್ಷೆ' ಮುಂದೂಡಿಕೆ ಇಲ್ಲ : ಸುಪ್ರೀಂಕೋರ್ಟ್ ನಿಂದ ಮಹತ್ವದ ಆದೇಶ

ಅಂತಿಮ ವರ್ಷದ ‘ಪದವಿ ಪರೀಕ್ಷೆ’ ಮುಂದೂಡಿಕೆ ಇಲ್ಲ : ಸುಪ್ರೀಂಕೋರ್ಟ್ ನಿಂದ ಮಹತ್ವದ ಆದೇಶ

spot_img
- Advertisement -
- Advertisement -

ನವದೆಹಲಿ: ಅಂತಿಮ ವರ್ಷದ ‘ಪದವಿ ಪರೀಕ್ಷೆ’ ನಡೆಸಲೇಬೇಕು, ಪರೀಕ್ಷೆ ನಡೆಸದೇ ಪಾಸ್ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪರೀಕ್ಷೆ ಮುಂದೂಡಿಕೆ ಕೋರಿದ್ದ ಅರ್ಜಿ ವಿಚಾರಣೆ ವಜಾ ಮಾಡಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಪದವಿ ಪರೀಕ್ಷೆ ನಡೆಸಲೇಬೇಕು. ಪದವಿ ಪರೀಕ್ಷೆ ಮುಂದೂಡಿಕೆ ಇಲ್ಲ. ಪರೀಕ್ಷೆ ನಡೆಸದೇ ಪಾಸ್ ಮಾಡುವಂತಿಲ್ಲ. ಸೆ.30 ರೊಳಗೆ ಪರೀಕ್ಷೆ ನಡೆಸುವುದು ಕಡ್ಡಾಯವಲ್ಲ. ಆದರೆ ಪರೀಕ್ಷೆ ಮುಂದೂಡುವಂತಿಲ್ಲ. ಪರೀಕ್ಷೆ ದಿನಾಂಕ ನಿಗದಿ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ.

ಪರೀಕ್ಷೆಗಳನ್ನು ಮುಂದೂಡುವುದಕ್ಕೆ ಸಂಬಂಧಪಟ್ಟಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಸ್‌ಡಿಎಂಎ) ನಿರ್ಧಾರವು ಮೇಲುಗೈ ಸಾಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು. ಆದರೆ ಇದೇ ವೇಳೆ ಎಸ್‌ಡಿಎಂಎ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಲ್ಲದೆ ಉತ್ತೀರ್ಣರಾಗಲು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

- Advertisement -
spot_img

Latest News

error: Content is protected !!