Sunday, April 28, 2024
Homeಮನರಂಜನೆಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸನ್ನಿ ಲಿಯೋನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸನ್ನಿ ಲಿಯೋನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

spot_img
- Advertisement -
- Advertisement -

ಮಾಜಿ ನೀಲಿ ಚಿತ್ರ ತಾರೆ ಮತ್ತು ಬಾಲಿವುಡ್ ನಟಿ ಸನ್ನಿ ಲಿಯೋನ್​ಗೆ ಇಂದು 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಟ್ವಿಟರ್​ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಸನ್ನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ಸದ್ಯ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ, ತಮ್ಮ ಮೂವರು ಮಕ್ಕಳೊಂದಿಗೆ ಅಮೆರಿಕಾದ ಲಾಸ್​ ಏಂಜಲೀಸ್​​ನಲ್ಲಿದ್ದಾರೆ. ಕೊರೊನಾ ಹಾವಳಿ ಹಿನ್ನೆಲೆ ಅದು ತಮ್ಮ ಮಕ್ಕಳಿಗೆ ಸುರಕ್ಷಿತ ಸ್ಥಳ ಅನ್ನೋ ದೃಷ್ಟಿಯಿಂದ ಅಲ್ಲಿ ನೆಲೆಸಿದ್ದಾರೆ. ಅಭಿಮಾನಿಗಳ ಹಾರೈಕೆಗೆ ಸನ್ನಿ ಅಲ್ಲಿಂದಲೇ ಧನ್ಯವಾದ ತಿಳಿಸಿದ್ದಾರೆ. ಇನ್ಸ್​​ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಅವರು, ಶುಭ ಕೋರಿದ ಎಲ್ಲರಿಗೂ ಧನ್ಯವಾದ. ನಿಮ್ಮ ಈ ಪ್ರೀತಿ ಸಿಕ್ಕಿರೋದು ನನ್ನ ಅದೃಷ್ಟ ಅಂತ ಹೇಳಿದ್ದಾರೆ.

ಸದ್ಯ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಸನ್ನಿ ಬ್ಯುಸಿಯಾಗಿದ್ದಾರೆ. ವೀರಮಾದೇವಿ ಅನ್ನೋ ಬಹುಕೋಟಿ ವೆಚ್ಚದ ಐತಿಹಾಸಿಕ ಸಿನಿಮಾ, ಕೋಲಾ ಕೋಲಾ ಹಾಗೂ ಹೆಲೆನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಬಾಂಗ್ಲಾ, ನೇಪಾಳ ಭಾಷೆಯಲ್ಲೂ ಸಿನಿಮಾ‌ ಮಾಡ್ತಿದ್ದಾರೆ.

- Advertisement -
spot_img

Latest News

error: Content is protected !!