Thursday, June 4, 2026
Homeಕರಾವಳಿಉಡುಪಿಉಡುಪಿ: ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಸಹಜ: ಸಚಿವ ಸುನೀಲ್ ಕುಮಾರ್...

ಉಡುಪಿ: ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಸಹಜ: ಸಚಿವ ಸುನೀಲ್ ಕುಮಾರ್ ಹೇಳಿಕೆ

- Advertisement -
- Advertisement -

ಉಡುಪಿ:  ಪ್ರವೀಣ್ ಹತ್ಯೆ ಬಳಿಕ  ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಸುನೀಲ್ ಕುಮಾರ್ ಕಾರ್ಯಕರ್ತರ ಕೋಪ ಸಹಜವಾಗಿದೆ, ಕಾರ್ಯಕರ್ತರ ಕೋಪವನ್ನು ಯಾವತ್ತು ಸರಿಯಲ್ಲ ಎನ್ನುವುದಿಲ್ಲ, ಮನೆಯಲ್ಲಿ ಸಣ್ಣಪುಟ್ಟ ಅಪಸ್ವರ ಇರುತ್ತೆ, ತಂದೆ ಮಗನಿಗೆ ಮಗ ತಂದೆಗೆ ಬುದ್ಧಿ ಹೇಳಲೇಬೇಕು. ಅದನ್ನು ಭಿನ್ನಾಭಿಪ್ರಾಯ ಎನ್ನಲು ಸಾಧ್ಯವಿಲ್ಲ, ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನೋದು ಸರಿಯಾಗಿದೆ ಎಂದಿದ್ದಾರೆ.

ನಾವು ಅವರ ಅಭಿಪ್ರಾಯವನ್ನು ನಾವು ಸ್ವೀಕರಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ನಾನೊಬ್ಬ ಕಾರ್ಯಕರ್ತನಾಗಿ ಗೌರವಿಸುತ್ತೇನೆ ಮತ್ತು ಕಾರ್ಯಕರ್ತರಿಗೆ ಎಲ್ಲವನ್ನೂ ತಿಳಿ ಹೇಳುತ್ತೇವೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

- Advertisement -

Latest News

error: Content is protected !!