ಮಂಗಳೂರು: ಕುಳಾಯಿಯ ಭಾರತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎಂ.ಡಿ.ಎಸ್ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಬೇಸಿಗೆ ಕ್ರೀಡಾ ಶಿಬಿರ-2026 ಹಮ್ಮಿಕೊಂಡಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೇಸ್‍ನ ಅಧ್ಯಕ್ಷರಾದ ಶ್ರೀಯುತ ಪುರುಶೋತ್ತಮ ಚಿತ್ರಾಪುರ ನೆರವೇರಿಸಿದರು. ಉದ್ಘಾಟನೆಯಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಕುಳಾಯಿ ಪ್ರದೇಶದಲ್ಲಿ ಭಾರತಿ ಎಜ್ಯುಕೇಶನಲ್ ಟ್ರಸ್ಟ್‍ನ ಸಂಸ್ಥಾಪಕರಾದ ದಿ| ಕೆ ದೇವಣ್ಣ ಶೆಟ್ಟಿಯವರು ಸಾಕ್ಷರತಾ ಆದೋಲನವನ್ನು ಸಕಾರಗೊಳಿಸಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಅವರು ಕಟ್ಟಿದ ಈ ಸಂಸ್ಥೆಯಲ್ಲಿ ವರ್ಷಂಪ್ರತೀ ಕ್ರೀಡಾಳುಗಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಕ್ರೀಡಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶಿಕ್ಷಣದಲ್ಲಿ ಕ್ರೀಡೆ ಎಂಬುವುದು ಪಠ್ಯದ ಅವಿಭಾಜ್ಯ ಅಂಗವಾಗಿದೆ. ಪ್ರತೀ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಮಾಡಿಕೊಳ್ಳ್ಳಬೇಕೆಂದು ಹೇಳುತ್ತಾ ಶಿಬಿರಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಜೇಯ್ ಸ್ಪೋಟ್ಸ್ ಕ್ಲಬ್‍ನ ಅಧ್ಯಕ್ಷರಾದ ಶ್ರೀ ಗಂಗಾಧರ ಬಂಜನ್, ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರು ಶ್ರೀ ದಿನೇಶ್ ಎಲ್ ಬಂಗೇರ, ಸುರತ್ಕಲ್ ಬ್ಲಾಕ್ ಕಾಂಗ್ರೇಸ್‍ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ರಾಜೇಶ್ ಪೂಜಾರಿರವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ಎಜ್ಯುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ ಆದರ್ಶ್ ಶೆಟ್ಟಿಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗಣೇಶ್‍ಪುರ ಜೆಸಿಐನ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಆಶ್ವಿನ್ ಶೇಖ ಕುಡುಂಬೂರು, ಭಾರತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ಎಂ.ಎಸ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಎಲಿಜಬೆತ್ ಗ್ರೆಟ್ಟಾ ಮಿರಾಂದ, ಎಂ.ಡಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಧಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಶಿಕ್ಷಕಿಯಾದ ಕುಮಾರಿ ಯುಕ್ತರವರು ಸ್ವಾಗತಿ, ಸಹಶಿಕ್ಷಕಿಯಾದ ಶ್ರೀಮತಿ ಸಂಗೀತಾ ಶೆಟ್ಟಿಯವರು ವಂದರ್ನಾಪಣೆ ಗೈದು, ಶಿಕ್ಷಕಿಯಾದ ಶ್ರೀಮತಿ ಶರ್ಮಿಳಾರವರು ಕಾರ್ಯಕ್ರಮವನ್ನು ನಿರೂಪಿಸಿದರು.


