- Advertisement -
![]()
- Advertisement -
ಸುಳ್ಯ; ಬೆಳ್ಳಾರೆ ಸಮೀಪದ ಕೊಡಿಯಾಲದಲ್ಲಿ ತಾಯಿ ಮಗು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಎರಡು ದೂರು ದಾಖಲಾಗಿದೆ.
ಮೃತ ಮಹಿಳೆಯ ತಂದೆ ಪುತ್ತೂರು ತಾಲೂಕಿನ ರುಕ್ಮಯ್ಯ ಗೌಡ ಅವರು ನನ್ನ ಮಗಳು ಆಕೆಯ ಮಗುವಿನೊಂದಿಗೆ(3 ವರ್ಷ) ಕೆರೆಗೆ ಹಾರಿ ಮೃತಪಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಅದರಂತೆ ದಿನಾಂಕ 4.1.2026 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 01/2026 ಕಲಂ: 103 BNS-2023 ರಂತೆ ಪ್ರಕರಣ ದಾಖಲಾಗಿದೆ.
ಇನ್ನು ಮೃತ ಮಹಿಳೆಯ ತಾಯಿ ರತ್ನಾವತಿ ಅವರು ದೂರು ನೀಡಿದ್ದು ತನ್ನ ಮಗಳ ಮರಣದಲ್ಲಿ ಸಂಶಯವಿದೆ ಎಂದಿದ್ದಾರೆ. ಇದೀಗ ಈ ಘಟನೆಗೆ ಸಂಬಂದಿಸಿದಂತೆ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬೆಳ್ಳಾರೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
- Advertisement -


