Monday, June 8, 2026
Homeಕರಾವಳಿಮಂಗಳೂರುಸುಳ್ಯ; ಮಾರಿಷಸ್ ನಲ್ಲಿ ಜಲಪಾತ ನೋಡಲು ಹೋಗಿದ್ದ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಪ್ರಕರಣ; ಹುಟ್ಟೂರಿನಲ್ಲಿ...

ಸುಳ್ಯ; ಮಾರಿಷಸ್ ನಲ್ಲಿ ಜಲಪಾತ ನೋಡಲು ಹೋಗಿದ್ದ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಪ್ರಕರಣ; ಹುಟ್ಟೂರಿನಲ್ಲಿ ನೆರವೇರಿದ ಅಂತ್ಯಸಂಸ್ಕಾರ

- Advertisement -
- Advertisement -

ಸುಳ್ಯ; ಮಾರಿಷಸ್ ನಲ್ಲಿ ಜಲಪಾತ ನೋಡಲು ಹೋಗಿದ್ದ ವೇಳೆ ಕಾಲುಜಾರಿ ಬಿದ್ದು ಸಾವನ್ನಪ್ಪಿದ  ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಲ್ಗುಜಿ ನಂದನ ಎಸ್‌. ಭಟ್‌ (26) ಅವರ ಅಂತ್ಯಸಂಸ್ಕಾರವನ್ನು ಇಂದು ನೆರವೇರಿಸಲಾಯಿತು.

ನಂದನ ಅವರು ಮಾರಿಷಸ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅಕ್ಟೋಬರ್ 13ರಂದು ಜಲಪಾತ ವೀಕ್ಷಣೆ ವೇಳೆ ಮೃತಪಟ್ಟಿದ್ದರು. ಮೃತನ ಮಾವ ಕಾರ್ಕಳದ ಸತ್ಯನಾರಾಯಣ ಭಟ್‌ ಅವರ ಕೋರಿಕೆಯಂತೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್‌ ಚೌಟ ಅವರ ಪ್ರಯತ್ನದೊಂದಿಗೆ ಕೇಂದ್ರ ಸರಕಾರದ ನೆರವಿನೊಂದಿಗೆ ಶುಕ್ರವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಬಳಿಕ ಆ್ಯಂಬುಲೆನ್ಸ್‌ನಲ್ಲಿ ನಾಲ್ಕೂರು ಗ್ರಾಮಕ್ಕೆ ತಂದು ಶನಿವಾರ ಮುಂಜಾನೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

- Advertisement -

Latest News

error: Content is protected !!