ಮಂಗಳೂರು; ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 9 ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ವಂಚಕಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕುಪ್ಪೆಪದವಿನ ಮುತ್ತೂರು ಗ್ರಾಮದ ನಿವಾಸಿ ಫರಿಧಾ ಬೇಗಂ @ ಫರಿದಾ ಬಂಧಿತೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೂರುದಾರ ಜಯರಾಯ ರವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡು ಎಲ್ಲಾ ಕಂಪನಿಗಳ ಲ್ಯಾಪ್ ಟಾಪ್ ಗಳನ್ನು ಸೇಲ್ಸ್ ಮತ್ತು ಸರ್ವೀಸ್ ಮಾಡಿಕೊಂಡಿದ್ದರು ಈ ಶಾಪ್ ನಿಂದ 1). ಆಪಲ್ ಕಂಪನಿಯ Macbook pro A2141 ಲ್ಯಾಪ್ ಟಾಪ್ 2). ಡೆಲ್ ಕಂಪನಿಯ Dell 5440/Core i5-13/16GB ಲ್ಯಾಪ್ ಟಾಪ್ ಮತ್ತು 3). ಆಪಲ್ ಕಂಪನಿಯ Macbook pro 2442 2021 M1 PRO ಲ್ಯಾಪ್ ಟಾಪ್ ನ್ನು ಆರೋಪಿತೆ ಫರಿಧಾ ಬೇಗಂ @ ಫರಿದಾ ಎಂಬುವಳು ತನ್ನ ಪರಿಚಯದ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಲ್ಯಾಪ್ ಟಾಪ್ ಗಳನ್ನು ಖರೀದಿಸಿಕೊಂಡು ಜಯರಾಮ್ ಅವರಿಗೆ ಒಟ್ಟು ರೂ 1,98,000/- ರೂಪಾಯಿಯ ಹಣವನ್ನು ಪಾವತಿಸದೇ ಮೋಸ ಮಾಡಿದದ್ದಳು. ಈ ಬಗ್ಗೆ ಫರೀದಾ ಬೇಗಂ ಎಂಬುವಳನ್ನು ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೋಹನ ಕೊಟ್ಟಾರಿರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬ್ಬಂದಿ ಮೂಲಕ ಪತ್ತೆ ಮಾಡಿ ವಶಕ್ಕೆ ಪಡೆದು ಆರೋಪಿತೆ ಫರಿದಾ ಬೇಗಂಳನ್ನು ನ್ಯಾಯಾಲಯಕ್ಕೆ ದಿನಾಂಕ:19-10-2025 ರಂದು ಹಾಜರುಪಡಿಸಿದ್ದು, ನ್ಯಾಯಾಲಯವು ದಿನಾಂಕ್ 03-11-2025 ರ ವರೆಗೆ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತದೆ.
ಫರಿದಾ ಬೇಗಂ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಾಕರನ್ನು ನಂಬಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ ಮೋಸಗೊಳಿಸಿರುವ ಬಗ್ಗೆ ಆಕೆಯ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವಲ್ಲದೆ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ, ಬಜಪೆ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮೋಸ, ವಂಚನೆಯ ಪ್ರಕರಣಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಒಂದು ಮೋಸ ವಂಚನೆಯ ಪ್ರಕರಣವು ದಾಖಲಾಗಿರುತ್ತದೆ. ಅಲ್ಲದೇ ಆರೋಪಿತಳು ಮುಲ್ಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಆರೋಪಿತಳ ವಿರುದ್ದ ವಾರೆಂಟ್ ನ್ನು ಕೂಡಾ ಹೊರಡಿಸಿರುತ್ತದೆ. ಹಾಗೂ ಕಾವೂರು ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದಳು.


