- Advertisement -
- Advertisement -
ಕಡಬ: ಕೊರೋನಾ ಲಾಕ್ ಡೌನ್ ನಿಂದಾಗಿ ವೈನ್ ಶಾಪ್ ಮುಚ್ಚಿರುವ ಕಾರಣ ಮದ್ಯಪಾನ ಚಟ ಹೊಂದಿದ್ದ ವ್ಯಕ್ತಿಯೋರ್ವ ಸಾರಾಯಿ ಸಿಗದಿದ್ದಕ್ಕೆ ಜುಗುಪ್ಸೆಗೊಂಡು ನೇಣಿಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಪತ್ತನಂತಿಟ್ಟ ನಿವಾಸಿ ಟೋನಿ ಥೋಮಸ್ (50) ಎಂದು ಗುರುತಿಸಲಾಗಿದೆ.
ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಅವರು ವಿಪರೀತ ಮದ್ಯ ಸೇವಿಸುತ್ತಿದ್ದು, ಶುಕ್ರವಾರ ಮದ್ಯ ಸಿಗದೆ ಚಡಪಡಿಸುತ್ತಿದ್ದರು ಎನ್ನಲಾಗಿದೆ. ಶನಿವಾರ ತಾನು ವಾಸಿಸುತ್ತಿದ್ದ ಬಂಟ್ರ ಗ್ರಾಮದ ನಂದುಗುರಿ ಎಂಬಲ್ಲಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -