Thursday, June 4, 2026
Homeತಾಜಾ ಸುದ್ದಿವಾಟ್ಸಾಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿದ್ದ ಸಾಲದ ಮಾಹಿತಿ ಬರೆದ ಯುವಕ: ಸಾಲಬಾಧೆ ತಾಳಲಾರದೆ ಕೆರೆಗೆ...

ವಾಟ್ಸಾಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿದ್ದ ಸಾಲದ ಮಾಹಿತಿ ಬರೆದ ಯುವಕ: ಸಾಲಬಾಧೆ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ

- Advertisement -
- Advertisement -

ಚಾಮರಾಜನಗರ: ಸಾಲಬಾಧೆ ತಾಳಲಾರದೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕಲ್ಲುಕಟ್ಟೆ ಕೆರೆಗೆ ಹಾರಿ ಯುವಕ ಸಾವನ್ನಪ್ಪಿದ್ದಾನೆ. ಕೆರೆಯ ಸಮೀಪದ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ದುರ್ದೈವಿ.

ಇಂದು ಬೆಳಗ್ಗೆ ಕೆರೆಗೆ ಹಾರಿರುವ ಯುವಕ ವಾಟ್ಸಾಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಬರೆದಿರುವ ವಿಜಯ್. ನನ್ನ ಸಾವಿಗೆ ನಾನೇ ಕಾರಣನೆಂದು ಬರೆದಿದ್ದಾನೆ. ನಮ್ಮ ಜಮೀನು ಮಾರಿಬಿಟ್ಟು ನಿಶುಗೆ 10 ಲಕ್ಷ ರೂಪಾಯಿ ಕೊಡಿ, ದೀಪುಗೆ 10 ಲಕ್ಷ ಕೊಡಿ. ಮಾದೇಶ್, ಸಿದ್ದೇಶ್, ಶಶಿಗೆ 3 ಲಕ್ಷ ರೂಪಾಯಿ ಕೊಡಿ ಪ್ಲೀಸ್, ಕಾಳಪ್ಪ, ಮಂಜಣ್ಣ ಅವರಿಗೆ 1 ಲಕ್ಷ ರೂ. ಚೀಟಿ ದುಡ್ಡು ಕೊಟ್ಟು ಬಿಡಿ ಎಂದು ಬರೆಯಲಾಗಿದೆ. .ಸ್ಥಳಕ್ಕೆ ಭೇಟಿ ನೀಡಿರುವ ಗುಂಡ್ಲುಪೇಟೆ ಪೊಲೀಸರು.ಶವ ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Latest News

error: Content is protected !!