Wednesday, June 3, 2026
Homeಕರಾವಳಿಮಂಗಳೂರಿನ ಕೂಳೂರಿನಲ್ಲಿ ವ್ಯಕ್ತಿ ನದಿಗೆ ಹಾರಿರುವ ಶಂಕೆ, ಶೋಧ ಕಾರ್ಯಾಚರಣೆ

ಮಂಗಳೂರಿನ ಕೂಳೂರಿನಲ್ಲಿ ವ್ಯಕ್ತಿ ನದಿಗೆ ಹಾರಿರುವ ಶಂಕೆ, ಶೋಧ ಕಾರ್ಯಾಚರಣೆ

- Advertisement -
- Advertisement -

ಮಂಗಳೂರು: ನಗರದ ಪಣಂಬೂರಿನ ಕೂಳೂರಿನಲ್ಲಿ ವ್ಯಕ್ತಿಯೊಬ್ಬ ನೀರಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವ್ಯಕ್ತಿಯೊಬ್ಬ ನದಿಗೆ  ಹಾರಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇಂದು ಬೆಳಗ್ಗೆ 10:30ರ ಸುಮಾರಿಗೆ ವ್ಯಕ್ತಿಯೊಬ್ಬರು ಮೇಲ್ಸೇತುವೆಯಲ್ಲಿ ಸ್ವಲ್ಪ ನಡೆದು ಬಳಿಕ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಕಾವೂರು ಮತ್ತು ಪಣಂಬೂರು ಪೊಲೀಸರು ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇನ್ನು ನದಿಗೆ ಹಾರಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಮಾಹಿತಿ ನೀಡಿದವರೂ ಸ್ಥಳದಿಂದ ತೆರಳಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ, ಈಜುಗಾರರಿಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!