Wednesday, June 24, 2026
Homeತಾಜಾ ಸುದ್ದಿಪ್ರಮೋದಾ ದೇವಿ ಕಾಲಿಗೆ ಅಡ್ಡಬಿದ್ದು ನಮಸ್ಕರಿಸಿದ ಸುಧಾಮೂರ್ತಿ: ಸೋಶಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ಪ್ರಮೋದಾ ದೇವಿ ಕಾಲಿಗೆ ಅಡ್ಡಬಿದ್ದು ನಮಸ್ಕರಿಸಿದ ಸುಧಾಮೂರ್ತಿ: ಸೋಶಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

- Advertisement -
- Advertisement -

ಮೈಸೂರು: ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿಯ ಕಾಲಿಗೆ ಅಡ್ಡ ಬಿದ್ದು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ನಮಸ್ಕರಿಸಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಸುಧಾಮೂರ್ತಿಯ ಸರಳತೆಗೆ ಜನ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಹಲವರು ಸುಧಾಮೂರ್ತಿಯವರ ನಡತೆಯನ್ನು ಸಮರ್ಥಿಸಿಕೊಂಡರು. ಇನ್ನು ಕೆಲವರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ರಾಜಪ್ರಭುತ್ವ ಕೊನೆಗೊಂಡು ದಶಕಗಳೇ ಕಳೆದರೂ ರಾಜವಂಶಸ್ಥರ ಮುಂದೆ ತಲೆ ಬಾಗಿ ಗೌರವ ಸಲ್ಲಿಸುವ ರೀತಿ ಇನ್ನೂ ಹೋಗಿಲ್ಲ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

- Advertisement -

Latest News

error: Content is protected !!