Tuesday, June 23, 2026
Homeಕರಾವಳಿಮಂಗಳೂರುಪುತ್ತೂರಿನಲ್ಲಿ ಹೀಗೊಂದು ಶ್ವಾನ ಪ್ರೀತಿ; ನಾಪತ್ತೆಯಾದ ನಾಯಿ ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ವಿತರಿಸಿದ...

ಪುತ್ತೂರಿನಲ್ಲಿ ಹೀಗೊಂದು ಶ್ವಾನ ಪ್ರೀತಿ; ನಾಪತ್ತೆಯಾದ ನಾಯಿ ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ವಿತರಿಸಿದ ಮಾಲೀಕ

- Advertisement -
- Advertisement -

ಪುತ್ತೂರು; ನಾಪತ್ತೆಯಾದ ನಾಯಿ ಹುಡುಕಿಕೊಟ್ಟವರಿಗೆ ಶ್ವಾನದ ಮಾಲೀಕ 50 ಸಾವಿರ ರೂಪಾಯಿ ಬಹುಮಾನ ವಿತರಿಸಿದ ಅಚ್ಚರಿಯ ಘಟನೆ ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ಎಂಬಲ್ಲಿ ನಡೆದಿದೆ.  

ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ಸುಮಾರು 30 ನಾಯಿಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ. ಇವರ ಮನೆಯ ‘ಚಿನ್ನು’ ಹೆಸರಿನ ದೇಸಿ ತಳಿಯ ನಾಯಿ ಫಿಟ್ಸ್ ಸಮಸ್ಯೆಯಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿತ್ತು. ಮೂರು ವಾರಗಳ ಹಿಂದೆ ಈ ವಿಶೇಷ ನಾಯಿ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ನಾಯಿ ಕಾಣೆಯಾದಾಗ ಗಣೇಶ್ ಅವರು ಕಂಗಾಲಾಗಿದ್ದರು. ತಕ್ಷಣವೇ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ, ನಗರದ ವಿವಿಧ ಕಡೆಗಳಲ್ಲಿ ಬ್ಯಾನರ್‍ಗಳನ್ನು ಕೂಡ ಅಳವಡಿಸಿದ್ದರು.

ಗಣೇಶ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಪೋಳ್ಯ ಪರಿಸರದವರೇ ಆದ ಪುರಂದರ ಎಂಬವರು ನಾಪತ್ತೆಯಾಗಿದ್ದ ಚಿನ್ನು ನಾಯಿಯನ್ನು ಹುಡುಕಿಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಕರೆಸಿ, 50,000 ರೂಪಾಯಿಗಳ ಚೆಕ್ ಅನ್ನು ವಿತರಿಸಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

- Advertisement -

Latest News

error: Content is protected !!