Saturday, May 4, 2024
Homeಕರಾವಳಿಬೆಳ್ತಂಗಡಿ; ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಯಶಸ್ವಿ ಕೀ ರಂಧ್ರ ಶಸ್ತ್ರಚಿಕಿತ್ಸೆ: ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ಗೆಡ್ಡೆಯನ್ನು...

ಬೆಳ್ತಂಗಡಿ; ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಯಶಸ್ವಿ ಕೀ ರಂಧ್ರ ಶಸ್ತ್ರಚಿಕಿತ್ಸೆ: ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ಗೆಡ್ಡೆಯನ್ನು ಹೊರತೆಗೆದೆ ವೈದ್ಯೆ

spot_img
- Advertisement -
- Advertisement -

ಬೆಳ್ತಂಗಡಿ: ಬೆನಕ ಹೆಲ್ತ್ ಸೆಂಟರ್ ಉಜಿರೆ ಯಲ್ಲಿ ಸ್ತ್ರೀ ರೋಗ ತಜ್ಞೆ ಡಾ. ಅಂಕಿತ ಜಿ ಭಟ್ ಅವರು ಮಹಿಳೆಯೊಬ್ಬರ ಗರ್ಭಕೋಶದ ದೊಡ್ಡ ಗಾತ್ರದ ಗೆಡ್ಡೆಯನ್ನು ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಮೋಹಿನಿ ದೇವರಾಜ್ ಎಂಬ 43ವರ್ಷದ ಮಹಿಳೆಯ  ಗರ್ಭಕೋಶದಲ್ಲಿದ್ದ 1.6 kg ತೂಕದ ಗೆಡ್ಡೆಯನ್ನು ಸ್ತ್ರೀ ರೋಗ ತಜ್ಙೆ ಡಾ‌‌. ಅಂಕಿತ ಜಿ ಭಟ್ ಅವರು 3 ಗಂಟೆಗಳ ಸತತ ಪ್ರಯತ್ನದ ಮೂಲಕ ಯಶಸ್ವಿಯಾಗಿ ಕೀ ರಂದ್ರ ಚಿಕಿತ್ಸೆ (Lap hysterectomy) ಮೂಲಕ ಹೊರತೆಗೆದಿದ್ದಾರೆ. ಇದೀಗ ರೋಗಿ ಗುಣಮುಖರಾಗುತ್ತಿದ್ದಾರೆ.  ತನ್ನ ಕಿರಿ ವಯಸ್ಸಿನಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಯನ್ನು ನೆರವೇರಿಸಿದ ಇವರ ಸಾಧನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಎರಡು ದಶಕಗಳಿಂದ ಉಜಿರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಬೆನಕ ಹೆಲ್ತ್ ಸೆಂಟರ್ NABH ಮಾನ್ಯತೆ ಪಡೆದಿದೆ. ರೋಗಿಗಳಿಗೆ ಅತ್ಯುತ್ತಮ ಸೇವೆ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ಆಸ್ಪತ್ರೆಯಲ್ಲಿ ಅತ್ಯಂತ ಅಪರೂಪದ ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿರುವುದು ಮತ್ತೊಂದು ಗರಿಮೆಗೆ ಒಳಗಾಗಿದೆ.

- Advertisement -
spot_img

Latest News

error: Content is protected !!