Monday, June 8, 2026
HomeUncategorizedಬೆಳ್ತಂಗಡಿ-ಧರ್ಮಸ್ಥಳ ಠಾಣೆಗಳಿಗೆ ನೂತನ ಎಸ್.ಐ ಗಳ ನೇಮಕ!!

ಬೆಳ್ತಂಗಡಿ-ಧರ್ಮಸ್ಥಳ ಠಾಣೆಗಳಿಗೆ ನೂತನ ಎಸ್.ಐ ಗಳ ನೇಮಕ!!

- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸ್ಥಾನಕ್ಕೆ ಮತ್ತು ಬೆಳ್ತಂಗಡಿ ಠಾಣೆಗೆ ಹೆಚ್ಚುವರಿಯಾಗಿ ಇನ್ನೊಬ್ಬರು ಸಬ್ ಇನ್ಸ್‌ಪೆಕ್ಟರ್ ಅವರನ್ನು ನೇಮಿಸಲು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ. (ಐಪಿಎಸ್) ಜು.15 ರಂದು ಆದೇಶ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತರಬೇತಿಯಲ್ಲಿದ್ದ (ಪ್ರೊಬೆಷನರಿ) ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರನ್ನು ಧರ್ಮಸ್ಥಳ ಠಾಣೆಗೆ ನಿಯೋಜಿಸಲಾಗಿದ್ದು, ಪವನ್ ನಾಯಕ್ ಅವರು ವರ್ಗಾವಣೆಗೊಂಡ ಬಳಿಕ ತೆರವಾಗಿದ್ದ ಸ್ಥಾನ ಇದೀಗ ಭರ್ತಿಗೊಂಡಿದೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ ತರಬೇತಿ ಪೂರ್ತಿಗೊಳಿಸಿದ ಸಂದೀಪ್ ಕುಮಾರ್ ಶೆಟ್ಟಿ ಅವರನ್ನು ನೂತನ ಎಸ್.ಐ ಆಗಿ ನಿಯೋಜಿಸಲಾಗಿದೆ.

- Advertisement -

Latest News

error: Content is protected !!