Sunday, May 12, 2024
Homeಕರಾವಳಿಮಂಗಳೂರು; ಎಕ್ಸಾಂನಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು...

ಮಂಗಳೂರು; ಎಕ್ಸಾಂನಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು ಹಾಕಿದ ವಿದ್ಯಾರ್ಥಿನಿಯರು; 6ನೇ ತರಗತಿಯ ಪುಟ್ಟ ಮಕ್ಕಳದ್ದೇ ಇಂತಹ ಮನಸ್ಥಿತಿಯಾದರೆ?

spot_img
- Advertisement -
- Advertisement -

ಮಂಗಳೂರು: ಪರೀಕ್ಷೆಯಲ್ಲಿ ಶಿಕ್ಷಕಿ ಕಡಿಮೆ ಅಂಕ ನೀಡಿದ ಕಾರಣಕ್ಕೆ ಶಿಕ್ಷಕಿಯ ವಾಟರ್ ಬಾಟಲ್ ಗೆ ವಿದ್ಯಾರ್ಥಿನಿಯರು ಅವಧಿ ಮೀರಿದ ಮಾತ್ರೆ ಹಾಕಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲದ ಶಾಲೆಯೊಂದರಲ್ಲಿ ಈ ಘಟನೆ‌ ನಡೆದಿದ್ದು, ಗಣಿತ ವಿಷಯದಲ್ಲಿ ಶಿಕ್ಷಕಿ ಒಂದು ಅಂಕ ಕಡಿಮೆ ಕೊಟ್ಟಿದ್ದರು ಎನ್ನಲಾಗಿದೆ‌.ಸರಿಯಾದ ಉತ್ತರಕ್ಕೆ ಅಂಕ ಮಾತ್ರೆಗಳನ್ನು ಶಿಕ್ಷಕಿಯ ನೀರಿನ ಬಾಟಲ್ ಗೆ ಹಾಕಿದ್ದರು.

ಗಣಿತ ಶಿಕ್ಷಕಿ‌ ಮತ್ತು ಸಹ ಶಿಕ್ಷಕಿಯಿಂದ ಮಾತ್ರೆ ಹಾಕಲ್ಪಟ್ಟಿದ್ದ ಬಾಟಲಿಯಲ್ಲಿದ್ದ ನೀರು ಸೇವನೆ ಮಾಡಿದ ಪರಿಣಾಮ ಓರ್ವ ಶಿಕ್ಷಕಿಗೆ ಮುಖದಲ್ಲಿ ಊತ ಕಾಣಿಸಿಕೊಂಡಿದ್ದು, ಮತ್ತೋರ್ವ ಶಿಕ್ಷಕಿ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.6 ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಈ ಕೃತ್ಯ ಎಸಗಿರುವ ದೃಶ್ಯ ಶಾಲೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇವಲ ಆರನೇ ತರಗತಿಯ ವಿದ್ಯಾರ್ಥಿನಿಯರಲ್ಲೇ ಇಂತಹ ಮನಸ್ಥಿತಿ ಇದ್ದರೆ ಮುಂದೆ ಹೇಗೆ ಅನ್ನೋ ಆತಂಕ ಮೂಡೋದು ಸಹಜ.

- Advertisement -
spot_img

Latest News

error: Content is protected !!