Tuesday, April 30, 2024
HomeUncategorizedಮಂಗಳೂರು ವಿವಿ‌ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ‌

ಮಂಗಳೂರು ವಿವಿ‌ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ‌

spot_img
- Advertisement -
- Advertisement -

ಮಂಗಳೂರು: ವಿಶ್ವವಿದ್ಯಾಲಯವು  ವಿದ್ಯಾರ್ಥಿಗಳ ಭವಿಷ್ಯದ ಜೊತೆ  ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಮಂಗಳೂರು ವಿವಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪರೀಕ್ಷೆಯ ಫಲಿತಾಂಶ ನೀಡದೆ ಅಂಕ ಪಟ್ಟಿ ನೀಡದೆ, ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ನೀಡುತ್ತಿದೆ. ಈ ಬಗ್ಗೆ ವಿಚಾರಿಸಿದರೆ ಬೇಜವಾಬ್ದಾರಿ, ಅಸಡ್ಡೆಯಿಂದ ಉತ್ತರಿಸುತ್ತಾರೆ. ನಾಳೆ ಬನ್ನಿ ನಾಳಿದ್ದು ಬನ್ನಿ ಎಂದು ಹೇಳಿ ಕಾಲಹರಣ ಮಾಡುತ್ತಾರೆ. ವಿಶ್ವವಿದ್ಯಾಲಯಕ್ಕೆ ಕರೆಸಿಕೊಂಡು 10ಗೆ ಪರೀಕ್ಷಾಂಗ ಕುಲಸಚಿವರು ಬರುತ್ತಾರೆ 12 ಗಂಟೆಗೆ ಬರುತ್ತಾರೆ, 2 ಗಂಟೆಗೆ ಬರುತ್ತಾರೆ. 4 ಗಂಟೆಗೆ ಬರುತ್ತಾರೆ ಎಂದು ಸತಾಯಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ನಿಮ್ಮ ಒಬ್ಬರ ಸಮಸ್ಯೆ ಅಲ್ಲ 7000 ವಿದ್ಯಾರ್ಥಿಗಳ ಸಮಸ್ಯೆ ಇದೇ ಆಗಿದೆ ಎಂದು ಉಡಾಫೆಯಿಂದ ಉತ್ತರ ನೀಡುವ ಪರೀಕ್ಷಾಂಗ ಕುಲಸಚಿವರು ನೀಡುವ ಅಂಕಪಟ್ಟಿಯಲ್ಲಿ ಅನೇಕ ತಪ್ಪುಗಳು ಇವೆ. ಕೆಲವರಿಗೆ ಅಂಕ ಪಟ್ಟಿ ನೀಡದೆ ಇರುವುದು, ರಿಸಲ್ಟ್ ಅಲ್ಲಿ ತಾಂತ್ರಿಕ ಸಮಸ್ಯೆ, ಪರೀಕ್ಷೆ ಪೇಪರ್ ಮಿಸ್ಸೀಂಗ್, ರೀ ವ್ಯಾಲ್ಯೂವೇಶನ್ ತುಂಬಾ ತಡವಾಗಿ ಆರಂಭಿಸುವುದು, ಪರೀಕ್ಷಾ ದಿನಾಂಕವನ್ನು 1 ತಿಂಗಳ ಮುಂಚಿತವಾಗಿ ನೀಡದೇ ಇರುವುದು, ಪರೀಕ್ಷೆಯ ಶುಲ್ಕ ಪ್ರತಿ ಬಾರಿಯೂ ಹೆಚ್ಚು ಮಾಡುತ್ತಿರುವುದೆಲ್ಲ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

- Advertisement -
spot_img

Latest News

error: Content is protected !!