Friday, May 17, 2024
HomeUncategorizedಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾದ ದೇವರನಾಡು; ಸಾವನ್ನಪ್ಪಿದ ಕುಟುಂಬದ ಹಿರಿಯಜ್ಜಿಯನ್ನು ನಗು ನಗುತ್ತಾ ಕಳುಹಿಸಿಕೊಟ್ಟ ಮನೆ ಮಂದಿ

ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾದ ದೇವರನಾಡು; ಸಾವನ್ನಪ್ಪಿದ ಕುಟುಂಬದ ಹಿರಿಯಜ್ಜಿಯನ್ನು ನಗು ನಗುತ್ತಾ ಕಳುಹಿಸಿಕೊಟ್ಟ ಮನೆ ಮಂದಿ

spot_img
- Advertisement -
- Advertisement -

ಕೇರಳ; ತಮ್ಮ ಕುಟುಂಬದ ಹಿರಿಯಜ್ಜಿ ಸಾವನ್ನಪ್ಪಿದಾಗ ಅವರನ್ನು ಮನೆ ಮಂದಿ‌ ನಗು ನಗುತ್ತಾ ಖುಷಿಯಿಂದ ಕಳುಹಿಸಿಕೊಟ್ಟ ಘಟನೆ ಕೇರಳದಲ್ಲಿ ನಡೆದಿದೆ.

ಅಜ್ಜಿಯ ಶವಪೆಟ್ಟಿಗೆಯ ಮುಂದೆ ಇಡೀ ಕುಟುಂಬದ ಸದಸ್ಯರು ನಗು ನಗುತ್ತಾ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಪತ್ತಣಂತಿಟ್ಟ ಜಿಲ್ಲೆಯ ಮಲ್ಲಪಲ್ಲಿ ಗ್ರಾಮದಲ್ಲಿ 95 ವರ್ಷದ ಮರಿಯಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅವರಿಗೆ ಒಂಭತ್ತು ಮಕ್ಕಳಿದ್ದು,19 ಮೊಮ್ಮಕ್ಕಳಿದ್ದರು.ಇವರೆಲ್ಲರೂ ವಿವಿಧ ದೇಶಗಳಲ್ಲಿ ಇದ್ದು,ಇವರ ಸಾವಿನ ಸಮಯದಲ್ಲಿ ಎಲ್ಲರೂ ಬಂದು ಮನೆ ಸೇರಿದ್ದರು.

ಮರಿಯಮ್ಮ ಖುಷಿಯಾಗಿ ತಮ್ಮ 95 ವರ್ಷ ಕಳೆದಿದ್ದಾರೆ‌. ಆಕೆ ಎಲ್ಲಾ ಮಕ್ಕಳು ಮೊಮ್ಮಕ್ಕಳನ್ನು ತುಂಬಾ ಇಷ್ಟ ಪಡುತ್ತಿದ್ದಳು.ಇವರೆಲ್ಲರೂ ಆಕೆಯೊಂದಿಗೆ ಕಳೆದ ಸಮಯದ ಬಗ್ಗೆ ನೆನಪಿಗಾಗಿ ಎಲ್ಲರೂ ಪಾರ್ಥಿವ ಶರೀರದ ಬಳಿ ನಗುತ್ತಾ ಫೋಟೋ ಕ್ಲಿಕ್ಕಿಸಿ ಕಳುಹಿಸಿಕೊಟ್ಟಿದ್ದಾರೆ‌.

- Advertisement -
spot_img

Latest News

error: Content is protected !!