Sunday, May 19, 2024
Homeಕರಾವಳಿಉಡುಪಿಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕೆಂದರೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಬೇಕು: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕೆಂದರೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಬೇಕು: ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

spot_img
- Advertisement -
- Advertisement -

ಉಡುಪಿ: ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕೆಂದರೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಬೇಕು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾಳೆ ಕಟ್ಟಿಕೊಳ್ಳುವ ಮಕ್ಕಳ ಬದುಕು ಮುಖ್ಯ. ಮುಂದಿನ ಸಮಾಜ ಸುಶಿಕ್ಷಿತ ಸಮಾಜವಾಗಿ ಇರಬೇಕು. ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕೆಂದರೆ ಅದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕರಿಸಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳು. ಹಾಗಾಗಿ ಮಕ್ಕಳ ವಿದ್ಯಾರ್ಜನೆ ಬಹಳ ಮುಖ್ಯಎಂದಿದ್ದಾರೆ.

ಇನ್ನು ದೊಂಬಿ ಗಾಲಾಟೆ ಹಾನಿಯಾಗಬೇಕೆಂಬ ಅಪೇಕ್ಷೆ ಯಾರಿಗೂ ಇಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡಬೇಕು. ಪ್ರಕರಣದ ಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಏನು ತೀರ್ಪು ಬರುತ್ತದೆ ಕಾದು ನೋಡೋಣ. ತೀರ್ಪಿಗೆ ಅನುಗುಣವಾಗಿ ಮುಂದೆ ನಡೆಯೋಣ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!