Wednesday, June 24, 2026
Homeಚಿಕ್ಕಮಗಳೂರುಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಗೊಂಡು ಡ್ರಿಪ್ಸ್ ಹಾಕಿಸಿಕೊಂಡೇ ಪರೀಕ್ಷೆ ಬರೆದ ಎಸ್ಎಸ್ಎಲ್ ಸಿ ವಿದ್ಯಾರ್ಥಿ

ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಗೊಂಡು ಡ್ರಿಪ್ಸ್ ಹಾಕಿಸಿಕೊಂಡೇ ಪರೀಕ್ಷೆ ಬರೆದ ಎಸ್ಎಸ್ಎಲ್ ಸಿ ವಿದ್ಯಾರ್ಥಿ

- Advertisement -
- Advertisement -

ಚಿಕ್ಕಮಗಳೂರು: ಎಸ್ಎಸ್ ಎಲ್‌ಸಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಗೊಂಡು ಬಳಿಕ ಡ್ರಿಪ್ಸ್ ಹಾಕಿಸಿಕೊಂಡು ಪರೀಕ್ಷೆ ಬರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿ ಗಗನ್ ಎಂಬಾತ ಇಂದು ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲೇ ಅಸ್ವಸ್ಥಗೊಂಡಿದ್ದು, ಬಳಿಕ ಆತನನ್ನು ಆ್ಯಂಬ್ಯುಲೆನ್ಸ್ ಮೂಲಕ ಬಣಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಗ್ಲೂಕೋಸ್ ಡ್ರಿಪ್ಸ್ ಹಾಕಿಸಿಕೊಂಡ ವಿದ್ಯಾರ್ಥಿ ಗಗನ್ ವಾಪಸ್ ಪರೀಕ್ಷಾ ಕೇಂದ್ರಕ್ಕೆ ಬಂದು ಸಮಾಜಶಾಸ್ತ್ರ ಪರೀಕ್ಷೆ ಬರೆದಿದ್ದಾನೆ.

ಪರೀಕ್ಷೆ ಮುಗಿದ ಬಳಿಕ ಮತ್ತೆ ವಿದ್ಯಾರ್ಥಿಯನ್ನು ಅಸ್ಪತ್ರೆಗೆ ಶಿಕ್ಷಕರು ಕರೆದೊಯ್ದಿದ್ದಾರೆ. ಬಣಕಲ್ ಪ್ರೌಢ ಶಾಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿತ್ತು.

- Advertisement -

Latest News

error: Content is protected !!