Monday, June 8, 2026
HomeUncategorizedಬೆಳ್ತಂಗಡಿ : ಶಿಕ್ಷಕನಿಂದ ಮಕ್ಕಳಿಗೆ ಪಾಠದ ಜೊತೆ ಬೆತ್ತದ ಶಿಕ್ಷೆ: ನೊಂದ ಬಾಲಕಿಯ ಪೋಷಕರಿಂದ ದೂರು

ಬೆಳ್ತಂಗಡಿ : ಶಿಕ್ಷಕನಿಂದ ಮಕ್ಕಳಿಗೆ ಪಾಠದ ಜೊತೆ ಬೆತ್ತದ ಶಿಕ್ಷೆ: ನೊಂದ ಬಾಲಕಿಯ ಪೋಷಕರಿಂದ ದೂರು

- Advertisement -
- Advertisement -

ಬೆಳ್ತಂಗಡಿ : ಶಾಲೆಯಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ದಂಡಿಸುತ್ತಿರುವ ಬಗ್ಗೆ ಬೆಳ್ತಂಗಡಿ ಶಿಕ್ಷಣಾಧಿಕಾರಿಗೆ ಪೋಷಕರು ದೂರು ನೀಡಿದ ಘಟನೆ ಬೆಳ್ತಂಗಡಿಯ ಬಂದಾರಿನಲ್ಲಿ ನಡೆದಿದೆ‌.

ಇಲ್ಲಿನ ಮೊಗ್ರ ನಿವಾಸಿ ಸುಬ್ಬಯ್ಯ ಎಂಬವರು ತಮ್ಮ ಮಗಳು ಬಂದಾರು ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದು, ಆಕೆಗೆ ಶಾಲೆಯ ಶಿಕ್ಷಕ ರಾಘವೇಂದ್ರ ನಾಯಕ್‌ ಅವರು ಹೊಡೆದಿದ್ದು ಬೆನ್ನಲ್ಲಿ‌ ಗಾಯದ ಗುರುತುಗಳು ಬಂದಿವೆ. ಈ ಹಿಂದೆಯೂ ಒಂದು ಬಾರಿ ಹೊಡೆದಿದ್ದು ಹೊಡೆಯದಂತೆ ಅವರಿಗೆ ಹೇಳಲಾಗಿತ್ತು. ಇದೀಗ ಜುಲೈ 14 ರಂದು ಮತ್ತೆ ಹೊಡೆದಿದ್ದು ಗಾಯವಾಗಿದೆ‌. ಅಲ್ಲದೇ ಮಗಳು ಶಾಲೆಗೆ ಹೋಗಲು ಹಿಂದೇಟು‌ ಹಾಕುತ್ತಿದ್ದಾಳೆ ಎಂದು ದೂರಿನಲ್ಲಿ‌ ತಿಳಿಸಿದ್ದಾರೆ.

ಅಲ್ಲದೇ ಶಿಕ್ಷಕ ರಾಘವೇಂದ್ರ ನಾಯಕ್ ವಿರುದ್ಧ ಕಾನೂನಾತ್ಮಕ ಕ್ರಮ‌ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲ್ಲೆಗೊಳಗಾದ ವಿದ್ಯಾರ್ಥಿನಿದ ತಂದೆ ಮನವಿ‌‌‌ ಮಾಡಿದ್ದಾರೆ‌.

- Advertisement -

Latest News

error: Content is protected !!