ಮಂಗಳೂರು: ಮನೆಯಲ್ಲಿದ್ದ ಚಿನ್ನಾಭರಣ ಅಡವಿಟ್ಟು ಆನ್ಲೈನ್ ನಲ್ಲಿ ನಕಲಿ ಹೂಡಿಕೆ ಮಾಡಿ ವಿದ್ಯಾರ್ಥಿಯೊಬ್ಬ 32ಲಕ್ಷ ಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪ್ರಸ್ತುತ ಹೋಮಿಯೂಪತಿ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಅದರೊಂದಿಗೆ ಪೌರೋಹಿತ್ಯವನ್ನು ಸಹ ಕಲಿಯುತ್ತಿಯುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಕಳೆದ ನವೆಂಬರ್ 2025 ನೇ ಸಾಲಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್ ಆಪ್ ನಂಬ್ರ:8480413826 ನಿಂದ ಸಂದೇಶ ಕಳುಹಿಸಿ DBS trading ನ ಬಗ್ಗೆ ವಿವರಿಸಿ ಹಣ ಹೂಡಿಕೆ ಮಾಡಿ ಪ್ರತಿದಿನ ಶೇ.5 ರಿಂದ 10 ರಷ್ಟು ಲಾಭಾಂಶ ಗಳಿಸಬಹಿದೆಂದು ತಿಳಿಸಿರುತ್ತಾರೆ.ನಂತರ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ 2025 ರ ಡಿಸೆಂಬರ್ ಅಂತ್ಯದೊಳಗೆ ಶೇ.800 ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿರುತ್ತಾರೆ.
ಇದರಿಂದ ಪಿರ್ಯಾದಿದಾರರು ಪ್ರೇರೇಪಿತರಾಗಿ ಆನ್ ಲೈನ್ ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಗಳಿಸಬಹುದೆಂಬ ಇರಾದೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ಹೂಡಿಕೆ ಮಾಡಲು ಮುಂದಾಗಿರುತ್ತಾರೆ.ಆರಂಭದಲ್ಲಿ ಪಿರ್ಯಾದಿದಾರರಿಗೆ Meena Bhat ಎಂಬ ಅಪರಿಚಿತ ಮಹಿಳೆ ವಿದ್ಯಾರ್ಥಿಗೆ ಮಾರ್ಗದರ್ಶಕಿಯಾಗಿದ್ದು ಪ್ರತಿದಿನ ನಿರಂತರವಾಗಿ ವಾಟ್ಸ್ ಆಪ್ ನಲ್ಲಿ ಸಂದೇಶ ಕಳುಹಿಸುತ್ತಾ ಹಣ ಹೂಡಿಕೆ ಮಾಡುವಂತೆ ಪ್ರೇರಪಣೆ ನೀಡುತ್ತಿದ್ದಳು.
ಅದರಂತೆ ಅವರು ಬೇರೆ ಬೇರೆ ಸಂಖ್ಯೆಯ ಮೂಲಕ ವಿದ್ಯಾರ್ಥಿಯನ್ನು ಸಂಪರ್ಕಿಸಿ ಹೂಡಿಕೆ ಮಾಡಲು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ UPI,IMPS & RTGS ಮುಖಾಂತರ ಹಂತ ಹಂತವಾಗಿ ಹಣವನ್ನು ಹಾಕಲು ತಿಳಿಸಿದ್ದಾರೆ. ಅದರಂತೆ ವಿದ್ಯಾರ್ಥಿ ಅಪರಿಚಿತ ವ್ಯಕ್ತಿಗಳು ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ದಿನಾಂಕ:05-11-2025 ರಿಂದ 26-11-2025 ರ ವರೆಗೆ ಹಂತ ಹಂತವಾಗಿ ಒಟ್ಟು 31,99,800/- ರೂ ಗಳನ್ನು ತನ್ನ ಕರ್ನಾಟಕ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿದ್ದಾನೆ. ನಂತರದ ದಿನಗಳಲ್ಲಿ ವಿದ್ಯಾರ್ಥಿ ಹೂಡಿಕೆ ಮಾಡಿದ ಹಣವನ್ನು ವಾಪಾಸು ನೀಡುವಂತೆ ಅಪರಿಚಿತ ವ್ಯಕ್ತಿಗಳಲ್ಲಿ ಕೇಳಿಕೊಂಡಾಗ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಹಾಗೂ ತೆರಿಗೆ ಇತರೆ ಶುಲ್ಕಗಳನ್ನು ಪಾವತಿಸುವಂತೆ ಇಲ್ಲವಾದಲ್ಲಿ ಯಾವುದೇ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ. ವಿದ್ಯಾರ್ಥಿ ಈಗಾಗಲೇ ತಮ್ಮ ಎಲ್ಲಾ ಉಳಿತಾಯದ ಹಣ ಮತ್ತು ಮನೆಯಲ್ಲಿದ್ದ ಬಂಗಾರವನ್ನೆಲ್ಲಾ ಬ್ಯಾಂಕಿನಲ್ಲಿ ಅಡಮಾನ ಇರಿಸಿ ಸಾಲ ತೆಗೆದು ಎಲ್ಲಾ ಹಣವನ್ನು ಅಪರಿಚಿತ ವ್ಯಕ್ತಿ ತಿಳಿಸಿದಂತೆ ವರ್ಗಾಯಿಸಿದ್ದಾನೆ.ಆದರೆ ಆತನಿಗೆ ಹೂಡಿಕೆ ಮಾಡಿದ ಯಾವುದೇ ಹಣ ಮತ್ತು ಲಾಭಾಂಶ ದೊರಕದಿದ್ದಾಗ ವಿದ್ಯಾರ್ಥಿ ಭಯಬೀತರಾಗಿ ತಮ್ಮ ಮನೆಯವರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.


