Friday, June 26, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಬೆಳಾಲು ಎಸ್ ಡಿಎಂ ಅನುದಾನಿತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ

ಬೆಳ್ತಂಗಡಿ; ಬೆಳಾಲು ಎಸ್ ಡಿಎಂ ಅನುದಾನಿತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ

- Advertisement -
- Advertisement -

ಬೆಳ್ತಂಗಡಿ; ಬೆಳಾಲು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂ.19 ರಂದು ನಡೆಯಿತು.

ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ  ಚುನಾವಣಾ ಅಧಿಸೂಚನೆಯಿಂದ ಹಿಡಿದು ಪ್ರಮಾಣ ಪತ್ರ ನೀಡುವಲ್ಲಿ ತನಕ ಮತ್ತು  ಮತಯಂತ್ರದ (ಇ.ವಿ.ಯಂ.) ಮೂಲಕ ಮತದಾನ ನಡೆಯಿತು.ಮುಖ್ಯ ಶಿಕ್ಷಕ  ಜಯರಾಮ ಮಯ್ಯ, ಚುನಾವಣಾಧಿಕಾರಿ ಶಿಕ್ಷಕ ಕಿರಣ್ ಹಾಗೂ ಇತರ ಶಿಕ್ಷಕ ವರ್ಗದ ಸಹಯೋಗದೊಂದಿಗೆ ಚುನಾವಣ ಪ್ರಕ್ರಿಯೆ ನಡೆಯಿತು.

ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಮೋಹನ್ ಕೃಷ್ಣ, ಉಪನಾಯಕಿಯಾಗಿ 9ನೇ ತರಗತಿಯ ನೇತ್ರಾವತಿ,  ಕಾರ್ಯದರ್ಶಿಯಾಗಿ 10ನೇ ತರಗತಿಯ ಮನೀಷ್ ಚುನಾಯಿತರಾದರು.ಆಯ್ಕೆಯಾದ ಅಭ್ಯರ್ಥಿಗಳನ್ನು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.ಇಡೀ ಚುನಾವಣಾ ಪ್ರಕ್ರಿಯೆಯ ಅರಿವನ್ನು ಪಡೆದ ವಿದ್ಯಾರ್ಥಿಗಳು ಉತ್ಸಾಹದಿಂದ ಮತ ಚಲಾಯಿಸಿದ್ದಕ್ಕಾಗಿ ಅವರಿಗೆ ಪೆನ್ನನ್ನು ಉಡುಗೊರೆಯಾಗಿ ನೀಡಲಾಯಿತು .

- Advertisement -

Latest News

error: Content is protected !!