Thursday, June 4, 2026
Homeಕರಾವಳಿಮಂಗಳೂರು;ಮುಡಿಪು ಬಳಿ ಸರಣಿ ಅಪಘಾತಕ್ಕೆ ವಿದ್ಯಾರ್ಥಿ ಬಲಿ

ಮಂಗಳೂರು;ಮುಡಿಪು ಬಳಿ ಸರಣಿ ಅಪಘಾತಕ್ಕೆ ವಿದ್ಯಾರ್ಥಿ ಬಲಿ

- Advertisement -
- Advertisement -

ಮಂಗಳೂರು: ಸರಣಿ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರು ತಾಲೂಕಿನ ಮುಡಿಪು ಬಳಿ ಸಂಭವಿಸಿದೆ.ಪೊಲೀಸ್ ಬ್ಯಾರಿಕೇಡ್, ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆದು ಬಾಲಕನಿಗೆ ಕಾರು ಗುದ್ದಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.

ರಸ್ತೆಬದಿ ನಿಂತಿದ್ದ ವಿದ್ಯಾರ್ಥಿ ಕಾರ್ತಿಕ್ (12) ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಬಂಟ್ವಾಳ ತಾಲೂಕಿನ ಪಜೀರು ನಿವಾಸಿಯಾಗಿದ್ದಾನೆ.

ಮುಡಿಪು ಜಂಕ್ಷನ್ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ಕಾರು ಚಾಲಕ‌ನನ್ನು ಪೊಲೀಸರು ವಶಕ್ಕೆ‌ ಪಡೆದಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!