Friday, June 5, 2026
Homeಕರಾವಳಿಉಡುಪಿಮಣಿಪಾಲ: ಮಾದಕ ವಸ್ತು ಸೇವನೆ ಪ್ರಕರಣ: ಐವರು ಯುವಕರ ಬಂಧನ

ಮಣಿಪಾಲ: ಮಾದಕ ವಸ್ತು ಸೇವನೆ ಪ್ರಕರಣ: ಐವರು ಯುವಕರ ಬಂಧನ

- Advertisement -
- Advertisement -

ಮಣಿಪಾಲ: ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಡಿದ್ದಾರೆ.

ದೀಪಕ್ (23) , ಆದಿನಾಥ್ ಎಸ್ ಗಾಣಿಗ (29), ಶರತ್ (24), ಮೊಹಮ್ಮದ್ ಆಜಮ್ (37), ಅನುಪಮ್ (24) ಪೊಲೀಸರು ವಶಕ್ಕೆ ಪಡೆದ ಯುವಕರು.

ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಆಚಾರ್ಯ ಕಾಂಪೌಂಡ ಬಳಿ ಐವರು ಯುವಕರು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಮಣಿಪಾಲ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಯುವಕರು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!