Wednesday, May 22, 2024
Homeತಾಜಾ ಸುದ್ದಿಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿದರೆ ಕಠಿಣ ಕ್ರಮ! ಓಲಾ, ಒಕಿನಾವಾ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿದರೆ ಕಠಿಣ ಕ್ರಮ! ಓಲಾ, ಒಕಿನಾವಾ ಕಂಪನಿಗಳಿಗೆ ಕೇಂದ್ರದ ಎಚ್ಚರಿಕೆ

spot_img
- Advertisement -
- Advertisement -

ಹೊಸದಿಲ್ಲಿ: ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣದಲ್ಲಿ ಸರಕಾರ ಕಠಿಣ ನಿಲುವು ತಳೆದಿದೆ. ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಓಕಿನಾವಾ ಮತ್ತು ‘ಪ್ಯೂರ್ ಇವಿ’ಗಳಿಗೆ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ಕಳುಹಿಸಿದೆ. ದೋಷಪೂರಿತ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಈ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರದ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಂಪನಿಗಳಿಗೆ ಜುಲೈ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. ಕಂಪನಿಗಳಿಂದ ಪ್ರತಿಕ್ರಿಯೆ ಬಂದ ನಂತರ ಈ ಕಂಪನಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರಕಾರ ನಿರ್ಧರಿಸಲಿದೆ.

ಕಳೆದ ಏಪ್ರಿಲ್‌ನಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಲವು ಘಟನೆಗಳು ವರದಿಯಾಗಿವೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿ ಬರುವ ‘ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA), ಕಳೆದ ತಿಂಗಳು ಪ್ಯೂರ್‌ EV ಮತ್ತು ಬೂಮ್ ಮೋಟಾರ್ಸ್‌ಗೆ ನೋಟಿಸ್‌ ಕಳುಹಿಸಿತ್ತು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೂಡ ಈ ಕಂಪನಿಗಳಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದು, ಕಂಪನಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಸರ್ಕಾರದ ತನಿಖೆಯ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಬೆಂಕಿ ಹೊತ್ತಿಕೊಂಡ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೋಷಯುಕ್ತ ಬ್ಯಾಟರಿ ಸೆಲ್‌ಗಳು ಮತ್ತು ವಿನ್ಯಾಸವನ್ನು ಹೊಂದಿದ್ದವು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೊದಲು ತನ್ನ ತನಿಖೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (DRDO) ವಹಿಸಿತ್ತು. ಓಲಾ ಎಲೆಕ್ಟ್ರಿಕ್, ಓಕಿನಾವಾ ಆಟೋಟೆಕ್, ಪ್ಯೂರ್ ಇವಿ, ಜಿತೇಂದ್ರ ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಬೂಮ್ ಮೋಟಾರ್ಸ್‌ನ ಸ್ಕೂಟರ್‌ಗಳಲ್ಲಿ ಉತ್ಪಾದನಾ ವೆಚ್ಚ ಉಳಿಸಲು ಗುಣಮಟ್ಟವಿಲ್ಲದ (ಕಳಪೆ) ವಸ್ತುಗಳನ್ನು ಬಳಸಲಾಗಿದೆ ಎಂದು ಡಿಆರ್‌ಡಿಒ ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್‌ ಸ್ಕೂಟರ್ ತಯಾರಕ ಕಂಪನಿಗಳು ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಜತೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಗ್ರಾಹಕರನ್ನು ರಕ್ಷಿಸಲು ಲಿಥಿಯಂ ಐಯಾನ್ ಬ್ಯಾಟರಿಗಳಿಗಾಗಿ ಹೊಸ ಕಾರ್ಯಕ್ಷಮತೆಯ ಮಾನದಂಡಗಳನ್ನು ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!