Thursday, June 4, 2026
Homeಕರಾವಳಿಕಡಬ: ಕಾರ್ಮಿಕರ ಮೊಬೈಲನ್ನು ಬೈಕಿನಲ್ಲಿ ಬಂದ ಅಪರಿಚಿತರು ಎಗರಿಸಿ ಪರಾರಿ !

ಕಡಬ: ಕಾರ್ಮಿಕರ ಮೊಬೈಲನ್ನು ಬೈಕಿನಲ್ಲಿ ಬಂದ ಅಪರಿಚಿತರು ಎಗರಿಸಿ ಪರಾರಿ !

- Advertisement -
- Advertisement -

ಕಡಬ: ಕಟ್ಟಡ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರ ಮೊಬೈಲ್ ನ್ನು ಬೈಕ್ ನಲ್ಲಿ ಬಂದ ಅಪರಿಚಿತರು ಎಗರಿಸಿ ಪರಾರಿಯಾದ ಘಟನೆ ಇಲ್ಲಿನ ಮಿನಿ ವಿಧಾನಸೌಧ ಬಳಿ ಇಂದು ನಡೆದಿದೆ.

ಪ್ಲಾಟಿನಂ ಬೈಕ್ ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿ ಅಪರಿಚಿತ ಯುವಕರು ಕಡಬ ತಹಸೀಲ್ದಾರ್ ಕಛೇರಿಯ ಹಿಂಬದಿಯಲ್ಲಿ ಇದ್ದ ಕಾರ್ಮಿಕರ ಬಳಿ ತುರ್ತಾಗಿ ಮಾತನಾಡಲು ಮೊಬೈಲ್ ಕೊಡುವಂತೆ ವಿನಂತಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಮಿಕರು ಮೊಬೈಲ್ ಕೊಟ್ಟಿದ್ದು, ಮೊಬೈಲ್ ಸಿಕ್ಕಿದೊಡನೆಯೇ ಬೈಕಿನಲ್ಲಿ ಯುವಕರು ಪರಾರಿಯಾಗಿದ್ದಾರೆ. ಕೂಡಲೇ ಕಾರ್ಮಿಕರು ಪೋಲಿಸ್ ಠಾಣೆಗೆ ತೆರಳಿದ್ದಾರೆ.

- Advertisement -

Latest News

error: Content is protected !!