Wednesday, June 24, 2026
HomeWorldಉಕ್ರೇನ್ ನಲ್ಲಿರುವ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ ಸ್ಥಾಪನೆ

ಉಕ್ರೇನ್ ನಲ್ಲಿರುವ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಸಹಾಯವಾಣಿ ಸ್ಥಾಪನೆ

- Advertisement -
- Advertisement -

ಬೆಂಗಳೂರು: ಉಕ್ರೇನ್ ನಲ್ಲಿರುವ ಕನ್ನಡಿಗರ ಸುರಕ್ಷಿತ ವಾಪಸಾತಿ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ನೋಡೆಲ್ ಅಧಿಕಾರಿ ‌ನೇಮಕ‌ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾಗಿರುವ ಐಎಫ್ ಎಸ್ ಅಧಿಕಾರಿ ಡಾ. ಮನೋಜ್ ರಾಜನ್ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.‌

ವಿದೇಶಾಂಗ ಇಲಾಖೆ ಮತ್ತು ಭಾರತೀಯ ರಾಯಭಾರ ಕಚೇರಿ ಜೊತೆ ಮನೋಜ್ ರಾಜನ್ ಸಮನ್ವಯ ಸಾಧಿಸಲಿದ್ದಾರೆ.‌ ಕನ್ನಡಿಗರ ಸಹಾಯಕ್ಕಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನು ಸ್ಥಾಪಿಸಿದೆ. ಕರ್ನಾಟಕದ ಸಹಾಯವಾಣಿ ಸಂಖ್ಯೆ 080-1070 ಮತ್ತು 080-22340676 ಸ್ಥಾಪಿಸಲಾಗಿದೆ. ಇದರ ಜೊತೆಯಲ್ಲಿ ಇ-ಮೇಲ್ ವಿಳಾಸ ಕೂಡಾ ನೀಡಲಾಗಿದ್ದು [email protected], [email protected] ಸಂಪರ್ಕ ಮಾಡಬಹುದಾಗಿದೆ. ನೋಡೆಲ್ ಅಧಿಕಾರಿ ಮನೋಜ್ ರಾಜನ್ ಮೇಲುಸ್ತುವಾರಿಯಲ್ಲಿ 24 ಗಂಟೆಗಳ ಕಾಲ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಉಕ್ರೇನ್ ನಲ್ಲಿ ಇರುವ ಕನ್ನಡಿಗರ ಕುಟುಂಬಸ್ಥರು ರಾಜ್ಯ ಸರ್ಕಾರದ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.‌

- Advertisement -

Latest News

error: Content is protected !!