Friday, May 17, 2024
HomeUncategorizedಬೆಳ್ತಂಗಡಿ: "ಭೂಮಿಯ ಫಲವತ್ತತೆಗಾಗಿ  ಸಾವಯವ ರಸಗೊಬ್ಬರಗಳನ್ನು ಬಳಸುವುದು ಉತ್ತಮ" - ರೈತರಿಗೆ ಬೆಳ್ತಂಗಡಿ ಸಂತ ಲಾರೆನ್ಸ್...

ಬೆಳ್ತಂಗಡಿ: “ಭೂಮಿಯ ಫಲವತ್ತತೆಗಾಗಿ  ಸಾವಯವ ರಸಗೊಬ್ಬರಗಳನ್ನು ಬಳಸುವುದು ಉತ್ತಮ” – ರೈತರಿಗೆ ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್ ನ ಪ್ರಧಾನ ಧರ್ಮಗುರು ಅಬ್ರಾಹಂ ಪಟ್ಟೇರಿ ಕಿವಿಮಾತು

spot_img
- Advertisement -
- Advertisement -

ಬೆಳ್ತಂಗಡಿ: ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ರೈತರು ಸಾವಯವ ರಸಗೊಬ್ಬರಗಳನ್ನು ಹೆಚ್ಚು ಬಳಸುವುದು ಉತ್ತಮ. ಇದರಿಂದಾಗಿ ಆರೋಗ್ಯಕರವಾದ ಕೃಷಿ ಉತ್ಪನ್ನಗಳನ್ನು ಪಡೆಯಲು ಸಾಧ್ಯ ಎಂದು ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್ ನ ಪ್ರಧಾನ ಧರ್ಮಗುರು ಅಬ್ರಾಹಂ ಪಟ್ಟೇರಿ ಹೇಳಿದರು.


ಅವರು ಸೋಮವಾರ ಬೆಳ್ತಂಗಡಿ ಬಸ್ ನಿಲ್ದಾಣ ಸಮೀಪದ ಖಾಡೀಲ್ಕರ್ ಕಾಂಪೌಂಡ್ ನಲ್ಲಿ ಏಂಜಲ್ ಆಗ್ರೋ ಕೇರ್ ನ್ನು ಉದ್ಘಾಟಿಸಿ ಮಾತನಾಡಿದರು.


ವಿಷಕಾರಿ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲಪತ್ತತೆ ವಿಷಕಾರಿಯಾಗಿದೆ. ಜನರಿಗೆ ವಿಷಕಾರಿ ಆಹಾರ ಪದಾರ್ಥಗಳು ದೊರೆಯುತ್ತಿದೆ. ಇದರಿಂದಾಗಿ ಜನರು ಹಿಂದಿಗಿಂತಲೂ ಹೆಚ್ಚು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.


ಮುಖ್ಯ ಅಥಿತಿಯಾಗಿ ಭಾಗವಹಿಸಿದ ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಶೈಲೇಶ್ ಕುರ್ತೋಡಿ ಮಾತನಾಡುತ್ತಾ ರೈತರು ಹೆಚ್ಚು ಹೆಚ್ಚು ಸಾವಯವ ಕೃಷಿಯತ್ತಾ ಗಮನ ಹರಿಸಿದರೆ , ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಿದೆ. ಸಾವಯವ ಗೊಬ್ಬರ ಬಳಕೆಯಿಂದ ಯಾವುದೇ ದುಷ್ಪರಿಣಾಮವಿಲ್ಲ ಎಂದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಮಳಿಗೆಯ ಮಾಲೀಕರ ಅಪ್ಪ ಬಿ.ಎಂ ಜೇಕಬ್, ತಾಯಿ ರೋಸಿ ಉಪಸ್ಥಿತರಿದ್ದರು.
 


ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ , ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ ಗೌಡ , ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಹೆಚ್ , ಇಂಟೆಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು , ದಸಂಸ (ಅಂಬೇಡ್ಕರ್ ವಾದ) ರಾಜ್ಯ ಸಂ ಸಂಚಾಲಕ ಚಂದು ಎಲ್ , ಮೈಸೂರು ವಿಭಾಗ ಸಂ ಸಂಚಾಲಕ ಬಿ.ಕೆ ವಸಂತ , ಸಿಪಿಐ(ಎಂ) ಮುಖಂಡರಾದ ಸುಕನ್ಯಾ ಹರಿದಾಸ್ , ಶೇಖರ್ ಲಾಯಿಲ , ಯುವ ನ್ಯಾಯವಾದಿ ಅಭಿನ್ ಕೊಯ್ಯೂರು ,   ಕಾಂಗ್ರೆಸ್ ಮುಖಂಡ ಅಭಿನಂದನ್ ಹರೀಶ್ ,  ಸಾಮಾಜಿಕ ಮುಖಂಡರಾದ ರಮಾನಂದ ಸಾಲಿಯಾನ್ ಮುಂಡೂರು , ಪ್ರಶಾಂತ್ ಮಚ್ಚಿನ , ಸುಧೀರ್ ದೇವಾಡಿಗ ಹುನ್ಸೆಕಟ್ಟೆ , ಪ್ರಭಾಕರ್ ಶಾಂತಿಗೋಡು , ಮಾಲೀಕರ ಸಹೋದರರಾದ ಪಿಡಬ್ಲ್ಯೂಡಿ ಗುತ್ತಿಗೆದಾರ ಅನಿಲ್ ಎ.ಜೆ , ಯುವ ಉದ್ಯಮಿ ಆದರ್ಶ ಎಜೆ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
 
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಏಂಜಲ್ ಆಗ್ರೋ ಕೇರ್ ಮಾಲೀಕ ಅಜಯ್ ಜಾಕೋಬ್ ದಂಪತಿ ಸ್ವಾಗತಿಸಿದರು. ಶೇಖರ್ ಲಾಯಿಲ ಧನ್ಯವಾದವಿತ್ತರು.

- Advertisement -
spot_img

Latest News

error: Content is protected !!