Sunday, June 7, 2026
HomeUncategorizedಹಾಸನ: ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದು ಮಗು ಕದ್ದ ಕಿಡಿಗೇಡಿಗಳು

ಹಾಸನ: ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದು ಮಗು ಕದ್ದ ಕಿಡಿಗೇಡಿಗಳು

- Advertisement -
- Advertisement -

ಹಾಸನ: ಇಲ್ಲಿನ ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಕಿಡಿಗೇಡಿಗಳು ಅಪಹರಣ ನಡೆಸಿರುವ ಘಟನೆ ನಡೆದಿದೆ.


ಅಸ್ಸಾಂ ಮೂಲದ ಕಾರ್ಮಿಕ ದಂಪತಿಯ ಗರ್ಭಿಣಿ ಮಹಿಳೆ ನಿನ್ನೆ ಭಾನುವಾರ (13ಮಾರ್ಚ್2022) ಸಂಜೆ 7ಗಂಟೆಗೆ ದಾಖಲಾಗಿದ್ದು, ಮಗು ಜನನವಾದ ನಂತರ ತಾಯಿಯನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ, ನಂತರ ಮಗುವಿನ ಸುಶ್ರೂಷೆ ಕೋಣೆಯಿಂದ ಅದ್ಯಾರೋ ನಾಲ್ವರು ಕಿಡಿಗೇಡಿಗಳು ಹೊಂಚು ಹಾಕಿ ಮಧ್ಯರಾತ್ರಿ 12ಗಂಟೆಗೆ ಮಗುವನ್ನು ಆಸ್ಪತ್ರೆಯ ಹಿಂಬದಿ ಬಾಗಿಲಿನಿಂದ ಅಪಹರಣ ನಡೆಸಿದ್ದಾರೆ.


ಅಪಹರಣ ನಡೆಸಿದವರು ನರ್ಸ್ ವೇಷದಲ್ಲಿದ್ದರು ಎನ್ನಲಾಗಿದೆ. ತಾಯಿಯ ಗೋಳಾಟ ಚೀರಾಟ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಸ್ಥಳೀಯರೇ ಆದ ಜಿಲ್ಲಾ ಆರೋಗ್ಯ ಅಧಿಕಾರಿ, ಸತೀಶ್ ಪೊಲೀಸ್ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!