Monday, May 20, 2024
HomeUncategorizedSSLC: ಪರೀಕ್ಷಾ ವೇಳಾಪಟ್ಟಿ ಮತ್ತು ಸಮಯ ಪ್ರಕಟ

SSLC: ಪರೀಕ್ಷಾ ವೇಳಾಪಟ್ಟಿ ಮತ್ತು ಸಮಯ ಪ್ರಕಟ

spot_img
- Advertisement -
- Advertisement -

ಬೆಂಗಳೂರು, ಮೇ 19: ಕೊರೊನಾವೈರಸ್ ಲಾಕ್ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಮತ್ತು ಪರೀಕ್ಷಾ ಸಮಯವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಜೂನ್ 25 ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ:

-ಜೂನ್ 25ರಂದು ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ

  • ಜೂನ್ 26ರಂದು ಅರ್ಥಶಾಸ್ತ್ರ
  • ಜೂನ್ 27ರಂದು ಗಣಿತ ಮತ್ತು ಸಮಾಜಶಾಸ್ತ್ರ
  • ಜೂ.29ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ- ಹಿಂದೂಸ್ತಾನಿ ಸಂಗೀತ
  • ಜುಲೈ 1ರಂದು ಸಮಾಜ ವಿಜ್ಞಾನ
  • ಜುಲೈ 2ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್‌
  • ಜುಲೈ 3ರಂದು ತೃತೀಯ ಭಾಷೆಗಳಿಗೆ ಪರೀಕ್ಷೆ
    ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಭಾಷೆಗಳ ಪರೀಕ್ಷೆ
  • ಜುಲೈ 3ರಂದು NSQF ಪರೀಕ್ಷೆಗಳು ನಡೆಯಲಿದೆ.

ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಯಂಡ್ ವೆಲ್‌ನೆಸ್ ಪರೀಕ್ಷೆ ಕೆಲವು ತಜ್ಞರು ಪರೀಕ್ಷೆ ಬೇಡ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಪರೀಕ್ಷೆ ನಡೆಸಬೇಕೆಂಬುದು ಸರ್ಕಾರದ ನಿಲುವು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಪರೀಕ್ಷಾ ಸಮಯ: ಬೆಳಗ್ಗೆ 10.30 ರಿಂದ ಹಾಗೂ ಮಧ್ಯಾಹ್ನ 2 ಗಂಟೆಗೆ ಆರಂಭ,
ಭಾನುವಾರ ಜೂನ್ 28 ಹಾಗೂ ಮಂಗಳವಾರ ಜೂನ್ 30ರಂದು ಪರೀಕ್ಷೆ ಇರುವುದಿಲ್ಲ. ಪ್ರತಿದಿನವು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪರೀಕ್ಷೆ ಬರೆಯಲು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇಂಗ್ಲಿಷ್, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ, ಒಟ್ಟು ನಾಲ್ಕು ವಿಷಯಗಳಿಗೆ ಒಂದೊಂದು ದಿನದ ಅಂತರ ಮಾತ್ರ ಇರುತ್ತದೆ. ಒಟ್ಟು ಹತ್ತು ದಿನಗಳ ಪರೀಕ್ಷೆ ಇದಾಗಿರಲಿದೆ. ಒಂದು ತಿಂಗಳ ನಂತರ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ಮೌಲ್ಯಮಾಪನಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಿದೆ. ಫಲಿತಾಂಶ ಬಳಿಕ ಸಪ್ಲಿಮೆಂಟರಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

- Advertisement -
spot_img

Latest News

error: Content is protected !!