Friday, April 19, 2024
Homeಕರಾವಳಿಏ.14ರ ಬಳಿಕ SSLC ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಪರೀಕ್ಷೆಗಾಗಿ ಒಂದು ವಾರ ಟೈಂ

ಏ.14ರ ಬಳಿಕ SSLC ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟ: ಪರೀಕ್ಷೆಗಾಗಿ ಒಂದು ವಾರ ಟೈಂ

spot_img
- Advertisement -
- Advertisement -

ಬೆಂಗಳೂರು : ಲಾಕ್ ಡೌನ್ ನಂತ್ರ ದಿಢೀರ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಘೋಷಣೆ ಮಾಡುವುದಿಲ್ಲ. ಏಪ್ರಿಲ್ 14ರ ನಂತ್ರ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅದಕ್ಕೂ ಮೊದಲು ಒಂದು ವಾರಗಳ ಕಾಲ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತ ಕೆಲಸವನ್ನು ತರಗತಿ ಆರಂಭಿಸುವ ಮೂಲಕ ಮಾಡಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸುರೇಶ್ ಕುಮಾರ್, ಲಾಕ್ ಡೌನ್ ಮುಗಿದ ಬಳಿಕ ಎಸ್‌ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಬಳಿಕ 1 ವಾರ ತರಗತಿಗಳನ್ನು ಆರಂಭಿಸಲಾಗುವುದು. ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಚೇತನ ತುಂಬಬೇಕು. ಪರೀಕ್ಷೆ ಎದುರಿಸಲು ಉತ್ಸಾಹ ತುಂಬುವ ಕೆಲಸ ಮಾಡಬೇಕು ಹೀಗಾಗಿ 1 ವಾರ ತರಗತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!