Friday, June 5, 2026
Homeತಾಜಾ ಸುದ್ದಿಕೋಟ್ಯಂತರ ರೂಪಾಯಿ ವಂಚನೆ: ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕನ ಬಂಧನ

ಕೋಟ್ಯಂತರ ರೂಪಾಯಿ ವಂಚನೆ: ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕನ ಬಂಧನ

- Advertisement -
- Advertisement -

ಬೆಂಗಳೂರು: ಸಚಿವರು, ಸಿಎಂ ಪುತ್ರ ಬಿ ವೈ ವಿಜಯೇಂದ್ರ ಹೆಸರು ಹೇಳಿಕೊಂಡು ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ಪಿ ಎ ರಾಜಣ್ಣ ಬಂಧನವಾಗಿದೆ.

ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ವಿರುದ್ಧ ಬಹುಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ಸಿಸಿಬಿಗೆ ದೂರು ಬಂದಿದ್ದವು. ಇದರ ಹಿನ್ನೆಲೆಯಲ್ಲಿ ಸಾಕ್ಷಿಗಳನ್ನು ಕಲೆ ಹಾಕಿ ಸಿಸಿಬಿ ಪೊಲೀಸರು ನಿನ್ನೆ ರಾಜು ಅವರನ್ನು ಬಂಧಿಸಿದ್ದಾರೆ.

ಸಿಎಂ ಪುತ್ರ ಮತ್ತು ಸಚಿವ ಶ್ರೀರಾಮುಲು ಅವರ ಹೆಸರು ಹೇಳಿಕೊಂಡು ಕೆಲಸ ಕೊಡಿಸುತ್ತೇನೆ ಎಂದು ಹಲವರಿಗೆ ನಂಬಿಸಿ ಅವರಿಂದ ಹಣ ಕೀಳುತ್ತಿದ್ದರು ಎಂಬ ಆರೋಪ ರಾಜು ಮೇಲಿದೆ. ನಿನ್ನೆ ಬಂಧನವಾಗಿರುವ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಇಂದು ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ನಲ್ಲಿ ವಿಚಾರಣೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!