Saturday, June 6, 2026
Homeಮನರಂಜನೆರಾಣಾ ದಗ್ಗುಬಾಟಿಯನ್ನು ಮತ್ತೆ ಕಾಲೆಳೆದ ನಟಿ ಶ್ರೀರೆಡ್ಡಿ

ರಾಣಾ ದಗ್ಗುಬಾಟಿಯನ್ನು ಮತ್ತೆ ಕಾಲೆಳೆದ ನಟಿ ಶ್ರೀರೆಡ್ಡಿ

- Advertisement -
- Advertisement -

ನಟಿ ಶ್ರೀರೆಡ್ಡಿ ಹೆಸರು ಕೇಳಿದ ತಕ್ಷಣ ನೆನಪಾಗೋದು ಅವರ ಪ್ರತಿಭಟನೆ ಹಾಗೂ ಅವರ ಒಂದಿಷ್ಟು ಆರೋಪಗಳು. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದ ದೊಡ್ಡ ಮಟ್ಟದಲ್ಲಿ ಕೇಳುವಂತೆ ಮಾಡಿದ್ದು ಶ್ರೀರೆಡ್ಡಿಯಿಂದ ಅಂದರೆ ತಪ್ಪಾಗಲ್ಲ.

ಏಕೆಂದರೆ ಇವರು ಈ ವಿಚಾರವಾಗಿ ಪ್ರತಿಭಟಿಸಿದ ನಂತರ ಸಿನಿಮಾ ರಂಗದಲ್ಲಿ ದೊಡ್ಡ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದಂತೂ ಸತ್ಯ. ಈ ವಿಚಾರ ಕನ್ನಡ ಸಿನಿಮಾ ರಂಗವನ್ನೂ ಬಿಟ್ಟಿಲ್ಲ.

ಹೀಗಿರುವಾಗ ಇದೀಗ ಶ್ರೀರೆಡ್ಡಿ ಮತ್ತೆ ಸದ್ದು ಮಾಡಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಪೋಸ್ಟ್ ಹಾಕುವ ಮೂಲಕ ವಿವಾದ ಅಥವಾ ಆರೋಪ ಮಾಡುವ ಶ್ರೀರೆಡ್ಡಿ ಇದೀಗ ರಾಣಾ ದಗ್ಗುಬಾಟಿಗೆ ವಿಶೇಷವಾಗಿ ವಿಶ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ನಟ ರಾಣಾ ದಗ್ಗುಬಾಟಿ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ನಟನಿಗೆ ಸಿನಿಮಾ ಮಂದಿ, ಅಭಿಮಾನಿಗಳು ವಿಶ್ ಮಾಡಿದ್ದಾರೆ. ಹಾಗೆಯೇ ಶ್ರೀರೆಡ್ಡಿ ಕೂಡ ವಿಶ್ ಮಾಡಿದ್ದಾರೆ.

ಆದರೆ ಶ್ರೀರೆಡ್ಡಿ ವಿಶ್ ಇತರರಿಗಿಂತ ಭಿನ್ನವಾಗಿದೆ. ರಾಣಾ ದಗ್ಗುಬಾಟಿಯವರೇ ನೀವು ತುಂಬಾ ಅನುಭವಿಸಿದ್ದೀರಾ. ಈಗಲಾದರೂ ನಿಮ್ಮ ಹುಡುಗಿ ಜೊತೆ ಚೆನ್ನಾಗಿ ಶಾಂತಿಯುತವಾಗಿ ಜೀವನ ಮಾಡಿ. ದೇವರು ಒಳ್ಳೆಯದು ಮಾಡಲಿ ಎಂದು ಫೇಸ್‌ಬುಕ್ ಮೂಲಕ ವಿಶ್ ಮಾಡಿದ್ದಾರೆ. ಹಿಂದೆ ರಾಣಾ ದಗ್ಗುಬಾಟಿ ಸಹೋದರನ ವಿರುದ್ಧವೂ ಈ ನಟಿ ಆರೋಪ ಮಾಡಿದ್ದರು. ಇದೀಗ ಈ ರೀತಿ ವಿಶ್ ಮಾಡಿದ್ದಾರೆ.

- Advertisement -

Latest News

error: Content is protected !!