Saturday, June 6, 2026
Homeಕರಾವಳಿದ.ಕ. ಜಿಲ್ಲೆಗೆ ಶುಭ ಶನಿವಾರ: ಜಿಲ್ಲೆಯ 167 ಮಂದಿಯ ಕೊರೊನಾ ವರದಿ ನೆಗೆಟಿವ್

ದ.ಕ. ಜಿಲ್ಲೆಗೆ ಶುಭ ಶನಿವಾರ: ಜಿಲ್ಲೆಯ 167 ಮಂದಿಯ ಕೊರೊನಾ ವರದಿ ನೆಗೆಟಿವ್

- Advertisement -
- Advertisement -

ಮಂಗಳೂರು: ಶುಕ್ರವಾರದಂದು ಅತ್ಯಧಿಕ 16 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದಾಖಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಶನಿವಾರ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಲಭ್ಯವಾದ ಎಲ್ಲಾ 167 ಮಂದಿಯ ಕೊರೋನಾ ವರದಿ ನೆಗೆಟಿವ್ ಆಗುವ ಮೂಲಕ ಜಿಲ್ಲೆಯ ಜನತೆಯಲ್ಲಿ ಎದುರಾಗಿದ್ದ ಆತಂಕ ದೂರವಾದಂತಾಗಿದೆ.

ನಿನ್ನೆ ಬಂದ ವರದಿಯ ಪ್ರಕಾರ, ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ ಬರೋಬ್ಬರಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿತ್ತು.

ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದ.ಕ. ಜಿಲ್ಲೆಯ 96, ಉಡುಪಿ ಜಿಲ್ಲೆಯ 52 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು, ವೈದ್ಯಕೀಯ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿರುವವರು, ದುಬೈಯಲ್ಲಿ ಕೆಲಸ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ಕುಟುಂಬ ಮೆಡಿಕಲ್‌ ಅಗತ್ಯ ಇರುವವರು, ಪ್ರವಾಸಕ್ಕೆ ಹೋಗಿ ಬಾಕಿಯಾದವರು ಇದ್ದರು.

ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ

- Advertisement -

Latest News

error: Content is protected !!