Wednesday, June 24, 2026
Homeಕರಾವಳಿಪುತ್ತೂರು: ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ:ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು

ಪುತ್ತೂರು: ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ:ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು

- Advertisement -
- Advertisement -

ಪುತ್ತೂರು: ನಿನ್ನೆ ನಡೆದಿದ್ದ ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಮುಖಂಡ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ. ಮೂವರು ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕರೆತಂದು ಪುತ್ತೂರು ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದೆ.

ಆರೋಪಿಗಳನ್ನು ಪೊಲೀಸರು ಕರೆ ತಂದ ವೇಳೆಯಲ್ಲಿ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನ ಸೇರಿದ್ದು, ಕೊನೆಗೆ ಪೊಲೀಸರು ಜನರನ್ನು ಚದುರಿಸಬೇಕಾಯಿತು.

ಈ ವೇಳೆ ಕೊಲೆ ಆರೋಪಿಗಳಿಗೆ ಮಹಜರು ಸ್ಥಳದಲ್ಲೇ ಮೃತ ಅಕ್ಷಯ್ ಕಲ್ಲೇಗ ಗುಂಪಿನಿಂದ ಎಚ್ಚರಿಕೆ ನೀಡಲ್ಪಟ್ಟಿದೆ ಎಂದು ಹೇಳಲಾಗಿದೆ. ನಿನ್ನೆ ಪುತ್ತೂರಿನ ನೆಹರು ನಗರದಲ್ಲಿ ತಲವಾರಿನಿಂದ ದಾಳೆ ನಡೆಸಿ ಅಕ್ಷಯ್ ಕಲ್ಲೇಗ ಹತ್ಯೆ ನಡೆದಿತ್ತು.

- Advertisement -

Latest News

error: Content is protected !!