Wednesday, June 24, 2026
Homeಕರಾವಳಿಉಡುಪಿಬೈಂದೂರು: ದಂಡ ಹಾಕುತ್ತಿದ್ದ ಪೊಲೀಸ್ ವಾಹನದ ಇನ್ ಶ್ಯೂರೆನ್ಸ್ 14 ವರ್ಷಗಳಿಂದ ಲ್ಯಾಪ್ಸ್!:ವಾಹನ ಚಾಲಕನ ಪ್ರಶ್ನೆಗೆ...

ಬೈಂದೂರು: ದಂಡ ಹಾಕುತ್ತಿದ್ದ ಪೊಲೀಸ್ ವಾಹನದ ಇನ್ ಶ್ಯೂರೆನ್ಸ್ 14 ವರ್ಷಗಳಿಂದ ಲ್ಯಾಪ್ಸ್!:ವಾಹನ ಚಾಲಕನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪೊಲೀಸರು

- Advertisement -
- Advertisement -

ಉಡುಪಿ: ದಂಡ ಹಾಕುತ್ತಿದ್ದ ಪೊಲೀಸ್ ವಾಹನದ್ದೇ ಇನ್ಶೂರೆನ್ಸ್ ಮಾಹಿತಿಯನ್ನು ವಾಹನ ಚಾಲಕ ಕೇಳಿದಾಗ ಪೊಲೀಸರು ಕಕ್ಕಾಬಿಕ್ಕಿಯಾದ ಘಟನೆ ಬೈಂದೂರಿನಲ್ಲಿ ನಡೆದಿದೆ.ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ನಡೆಸಿ ಸೀಟ್ ಬೆಲ್ಟ್, ವಿಮೆ ಮತ್ತು ಹೆಲ್ಮೆಟ್ ವಿಚಾರದಲ್ಲಿ ದಂಡ ಹಾಕುತ್ತಿದ್ದರು.ತಪಾಸಣೆ ಮಾಡುತ್ತಿದ್ದ ಪೊಲೀಸ್ ವಾಹನವನ್ನು 13 ವರ್ಷಗಳಿಂದ ವಿಮೆ ಪಾವತಿಸದೇ ಚಲಾಯಿಸುತ್ತಿರುವ ಬಗ್ಗೆ ವಾಹನ ಚಾಲಕನೋರ್ವ ದಂಡ ಹಾಕುತ್ತಿದ್ದ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ವಿಮೆ ಲ್ಯಾಪ್ಸ್ ಆಗಿರುವ ಬಗ್ಗೆ ಎಸ್ ಪಿಗೆ ಕೇಳಿ ನನಗೆ ಫೈನ್ ಹಾಕಲು ಬಿಡಿ ಎಂದು ಪೊಲೀಸ್ ಸಿಬ್ಬಂದಿ ಹೇಳಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!