Wednesday, June 3, 2026
Homeಕರಾವಳಿಬಜಿರೆ: ಅಡಿಕೆ ಮರದಿಂದ ಬಿದ್ದು ಬೆನ್ನುಮೂಳೆ ಮುರಿತ;ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಬಜಿರೆ: ಅಡಿಕೆ ಮರದಿಂದ ಬಿದ್ದು ಬೆನ್ನುಮೂಳೆ ಮುರಿತ;ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

- Advertisement -
- Advertisement -

ವೇಣೂರು: ಅಡಿಕೆ ಮರಕ್ಕೆ ಮದ್ದು ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಬಜಿರೆ ಗ್ರಾಮದ ತಿಮರಡ್ಡ ನಿವಾಸಿ ರಾಮಚಂದ್ರ ಗೌಡ ಅವರ ಚಿಕಿತ್ಸೆಗೆ ನೆರವಾಗುವಂತೆ ಅವರ ಕುಟುಂಬ ದಾನಿಗಳ ಮೊರೆ ಹೋಗಿದೆ.

ಕೃಷಿ ಹಾಗೂ ಹೈನುಗಾರಿಕೆಯ ಕಾಯಕವನ್ನೇ ನಂಬಿ ಬದುಕುವ ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು. ಆರ್ಥಿಕವಾಗಿಯೂ ಹಿಂದುಳಿದವರು. ಜು.30 ರಂದು ತಮ್ಮ ಮನೆಯ ತೋಟದಲ್ಲಿ ಅಡಿಕೆ ಮರಕ್ಕೆ ಮದ್ದು ಸಿಂಪಡಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮನೆಯ ಆಧಾರಸ್ತಂಭವಾಗಿದ್ದ ರಾಮಚಂದ್ರ ಅವರ ದುರ್ಘಟನೆಯಿಂದ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದ್ದು, ಚಿಕಿತ್ಸೆಯ ವೆಚ್ಚಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ. ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಲಿಚ್ಚಿಸುವ ದಾನಿಗಳು ರಾಮಚಂದ್ರ ಗೌಡ ಅವರ ವೇಣೂರು ಕೆನರಾ ಬ್ಯಾಂಕಿನ ಉಳಿತಾಯ ಖಾತೆ ಸಂಖ್ಯೆ: 54059570958 (ಐಎಫ್‌ಎಸ್‌ಸಿ ಕೋಡ್: ಎಸ್‌ಬಿಐನ್0040908)ಗೆ ಕಳುಹಿಸಬಹುದು ಅಥವಾ ಗೂಗಲ್ ಫೇ, ಫೋನ್ ಫೇ ಮೂಲಕ ಹಣ ಕಳುಹಿಸುವವರು 9480402871 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

- Advertisement -

Latest News

error: Content is protected !!