Friday, June 5, 2026
Homeತಾಜಾ ಸುದ್ದಿಮಾಹಾಮಾರಿಗೆ ಯುವ ನಾಯಕ ಬಲಿ- ಸಿಪಿಐ ಮುಖಂಡ ಹಾಗೂ ರಾಜ್ಯ ಯುವ ಕಲ್ಯಾಣ ಸಮಿತಿ ಅಧ್ಯಕ್ಷ...

ಮಾಹಾಮಾರಿಗೆ ಯುವ ನಾಯಕ ಬಲಿ- ಸಿಪಿಐ ಮುಖಂಡ ಹಾಗೂ ರಾಜ್ಯ ಯುವ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಬಿಜು ಇನ್ನಿಲ್ಲ

- Advertisement -
- Advertisement -

ಕೇರಳ: ಕೆಲವು ದಿನಗಳ ಹಿಂದೆ ರಾಜ್ಯದ ಸಿಪಿಐ(ಎಂ) ಮುಖಂಡ ಹಾಗೂ ರಾಜ್ಯ ಯುವ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಬಿಜು ಕೊರೊನಾವೈರಸ್ ಸೋಂಕು ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕೊರೋನಾ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ಕೊರೊನಾವೈರಸ್ ಸೋಂಕು ತುತ್ತಾಗಿದ್ದಂತ ಪಿ.ಬಿಜು(42) ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದರು.ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.

ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು COVID-19 ಪರಿಣಾಮವಾಗಿ ಮೂತ್ರಪಿಂಡದ ಸೋಂಕು,ಅಲ್ಲದೆ ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ವೈಫಲ್ಯದಿಂದ ಒಂದು ವಾರದಿಂದ ಡಯಾಲಿಸಿಸ್ ಗೆ ಒಳಗಾಗಿದ್ದರು ಎನ್ನಲಾಗಿದೆ. ಬಿಜು ಅವರು ತಂದೆ,ತಾಯಿ,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!