Saturday, May 18, 2024
Homeಮನರಂಜನೆಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರಿಷಭ್ ಶೆಟ್ಟಿ

ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ ರಿಷಭ್ ಶೆಟ್ಟಿ

spot_img
- Advertisement -
- Advertisement -

ಬೆಂಗಳೂರು : ರಕ್ಷಿತ್ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಅವರ ಸ್ನೇಹ ಎಂತಹದ್ದು ಎನ್ನೋದು ನಿಮಗೆಲ್ಲಾ ಗೊತ್ತೆ ಇದೆ. ರಕ್ಷಿತ್ ಅವರ ಖುಷಿ, ಸಂಭ್ರಮ, ನೋವು, ನಲಿವು ಎಲ್ಲದರಲ್ಲೂ ಅವರಿಗೆ ಸಾಥ್ ಕೊಡ್ತಾರೆ ರಿಷಭ್ ಶೆಟ್ಟಿ. ಇದೀಗ ರಕ್ಷಿತ್ ಶೆಟ್ಟಿ ಅವರು ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ಸಿನಿ ಪಯಣದಲ್ಲಿ 10 ವರ್ಷಗಳನ್ನು ಪೂರೈಸಿರೋದು..

ಹೌದು.. ನಮ್ ಏರಿಯಾಲ್ಲೊಂದ್ ದಿನ ಸಿನಿಾಮದ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ ಕರಾವಳಿಯ ಪ್ರತಿಭೆ ರಕ್ಷಿತ್ ಶೆಟ್ಟಿ ಆ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಪ್ರಯೋಗಗಳ ಮೂಲಕ ಯಶಸ್ವಿ ನಟನಾಗಿ ಗುರುತಿಸಿಕೊಂಡವರು. ಸಾಕಷ್ಟು ಏಳು ಬೀಳುಗಳ ನಡುವೆ ರಕ್ಷಿತ್  ತಮ್ಮ ಸಿನಿ ಜರ್ನಿಯ 10 ವರ್ಷಗಳನ್ನು  ಯಶಸ್ವಿಯಾಗಿ ಪೂರೈಸಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ ರಕ್ಷಿತ್.

ಉಳಿದವರು ಕಂಡಂತೆ, ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ವಾಸ್ತು ಪ್ರಕಾರ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಮುಂತಾದ ಈವರ ಸಿನಿಮಾಗಳನ್ನು ಸಿನಿ ರಸಿಕರು ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಇದೀಗ 10 ವರ್ಷಗಳ ಚಿತ್ರರಂಗದ ಪಯಣವನ್ನ ಪೂರೈಸಿರುವ ಸಂತಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಿಷಭ್ ಶೆಟ್ಟಿ ರಕ್ಷಿತ್ ಅವರ ವಿಶೇಷವಾಗಿ ಪೋಸ್ಟ್ ಒಂದನ್ನು ಹಾಕಿ ಶುಭ ಹಾರೈಸಿದ್ದಾರೆ.

“ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ‌ ಇಂದಿಗೆ 10 ವರ್ಷ..! ಮಗಾ, ಪ್ರಾರಂಭದಿಂದಲೇ ಹಲವಾರು ಕಷ್ಟಗಳನ್ನು ಮೆಟ್ಟಿ ನಿಂತು ಈ ಹಂತಕ್ಕೆ ಬಂದು ನಿಂತಿದ್ದೀಯ.. ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ‌‌ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು.. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುತ್ತೇನೆ.”‌ ಎಂದು ಪೋಸ್ಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!