Wednesday, May 8, 2024
HomeUncategorizedಮಂಗಳೂರು: ಕೆನರಾ ಬ್ಯಾಂಕ್ ವತಿಯಿಂದ ನನ್ನ ನೆಲ , ನನ್ನ ದೇಶ  ಕಾರ್ಯಕ್ರಮ.

ಮಂಗಳೂರು: ಕೆನರಾ ಬ್ಯಾಂಕ್ ವತಿಯಿಂದ ನನ್ನ ನೆಲ , ನನ್ನ ದೇಶ  ಕಾರ್ಯಕ್ರಮ.

spot_img
- Advertisement -
- Advertisement -

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರೋಪ ಕಾರ್ಯಕ್ರಮವಾಗಿ ದೇಶದಾದ್ಯಂತ ಆಚರಿಸಲಾಗುತ್ತಿರುವ “ಮೇರಿ ಮಾತಿ ಮೇರಾ ದೇಶ್” ( ನನ್ನ ನೆಲ , ನನ್ನ ದೇಶ ) ಕಾರ್ಯಕ್ರಮವು ಇತ್ತೀಚೆಗೆ ಲೀಡ್ ಬ್ಯಾಂಕ್ ದಕ್ಷಿಣ ಕನ್ನಡ (ಕೆನರಾ ಬ್ಯಾಂಕ್) ಇದರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಪೆರ್ಮುದೆ ಇಲ್ಲಿ ಜರುಗಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀಮತಿ ಕವಿತಾ ಎನ್ ಶೆಟ್ಟಿ ವಹಿಸಿ ಈ ಕಾರ್ಯಕ್ರಮವು ನಮ್ಮ ನೆಲ ,ವೀರರನ್ನು ಗೌರವಿಸುವ ಮೂಲಕ ರಾಷ್ಟ್ರದ ಬಗ್ಗೆ ಹೆಮ್ಮೆಯ ಭಾವವನ್ನು ತುಂಬುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಪಾಲಿಸಬೇಕಾದ ಪರಂಪರೆಯನ್ನು ರಕ್ಷಿಸಲು ಪ್ರೇರೇಪಿಸುತ್ತದೆ , ಮಕ್ಕಳು ಬಾಲ್ಯದಿಂದಲೆ ನಮ್ಮ ನೆಲ, ಪರಿಸರದ ಬಗ್ಗೆ ಕಾಳಜಿ ವಹಿಸಿ ಗಿಡಗಳನ್ನು ಪೋಷಿಸುವ ಕೆಲಸದಲ್ಲಿ ಉತ್ಸುಕರಾಗಿ ಇರಬೇಕೆಂದರು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಂದೇಶ್ ಪೂಜಾರಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪೆರ್ಮುದೆ ನಡೆಸಿ, ಇಂತಹ ಕಾರ್ಯಕ್ರಮಗಳು ನಮ್ಮನ್ನು ದೇಶ ಮತ್ತು ಪರಿಸರದ ಬಗ್ಗೆ ಜಾಗೃತಗೊಳಿಸುತ್ತದೆ ಕಾರ್ಯಕ್ರಮವನ್ನು ಆಯೋಜಿಸಿದ ಲೀಡ್ ಬ್ಯಾಂಕ್ ಗೆ ಧನ್ಯವಾದ ಅರ್ಪಿಸಿದರು, ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶ್ರೀ ಸುಧೀರ್, ಶಾಖಾ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಪೆರ್ಮುದೆ ಭಾಗವಹಿಸಿ ನಮ್ಮ ಕರ್ತವ್ಯಗಳ ಬಗ್ಗೆ ತಿಳಿದು ರಾಷ್ಟ್ರದ ಪ್ರಗತಿಗೆ ಕೈ ಜೋಡಿಸಬೇಕೆಂದರು‌ . ಕಾರ್ಯಕ್ರಮದಲ್ಲಿ ಅತಿಥಿಯಾಗಿ ಶ್ರೀ ಸುಬ್ರಹ್ಮಣ್ಯ, ವ್ಯವಸ್ಥಾಪಕರು ಸಂಜೀವಿನಿ ಮಂಗಳೂರು ತಾಲೂಕು, ಶ್ರೀಮತಿ ಕೋಮಲ, ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ ಉರ್ದು ಶಾಲೆ ಪೆರ್ಮುದೆ ಉಪಸ್ಥಿತರಿದ್ದರು.”ಮೇರಿ ಮಾತಿ ಮೇರಾ ದೇಶ್”ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ‘ಪಂಚ ಪ್ರಾಣ’ ಪ್ರತಿಜ್ಞೆಯನ್ನು ಶ್ರೀಮತಿ ವೈಶಾಲಿ ಎಸ್ ಗಟ್ಟಿ, ಹಣಕಾಸು ಸಾಕ್ಷರತಾ ಸಮಾಲೋಚಕರು ಅಮೂಲ್ಯ ಮಂಗಳೂರು ಭೋದಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಪೋಷಕರು,ಶಿಕ್ಷಕ ವೃಂದ, ಸ್ತ್ರೀ ಶಕ್ತಿ – ಸಂಜೀವಿನಿ ಸ್ವ- ಸಹಾಯ ಸಂಘಗಳ ಸದಸ್ಯರು ಪದಾಧಿಕಾರಿಗಳು,ಪೆರ್ಮುದೆ ಗ್ರಾಮಸ್ಥರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಸ್ವಾಗತವನ್ನು ಶ್ರೀಮತಿ ಭಾಗ್ಯಮ್ಮ, ಶಿಕ್ಷಕರು ಸ.ಹಿ.ಪ್ರಾ ಶಾಲೆ ಪೆರ್ಮುದೆ ಹಾಗೂ ನಿರೂಪಣೆಯನ್ನು ಶ್ರೀ ಲತೇಶ್ ಬಿ ಸಮಾಲೋಚಕರು ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಮಂಗಳೂರು ನಡೆಸಿದರು.

- Advertisement -
spot_img

Latest News

error: Content is protected !!