Wednesday, June 24, 2026
Homeಕೊಡಗುಇಂದು ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ವಿವಾಹ

ಇಂದು ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ವಿವಾಹ

- Advertisement -
- Advertisement -

ಮಡಿಕೇರಿ: ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು‌ ನಟ ಭುವನ್ ಪೊನ್ನಣ್ಣ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ನಿನ್ನೆ ಹರ್ಷಿಕಾ ನಿವಾಸದಲ್ಲಿ ಮೆಹಂದಿ ಶಾಸ್ತ್ರ ಮುಗಿದಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿರುವ ಕೊಡವ ಸಮಾಜದಲ್ಲಿ ವಿವಾಹ ಕಾರ್ಯ ನಡೆಯಲಿದೆ.

ಕೊಡವ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದ್ದು, ಚಲನಚಿತ್ರ ರಂಗದ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಚಲನಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿನ ಹಲವು ಗಣ್ಯರನ್ನು ಖುದ್ದು ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಮ್ಮ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು.

ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಇಂದು ವಿವಾಹ ಬಂಧನಕ್ಕೊಳಪಡಲಿದ್ದಾರೆ.

- Advertisement -

Latest News

error: Content is protected !!