Thursday, May 2, 2024
Homeತಾಜಾ ಸುದ್ದಿಐದೂವರೆ ಅಡಿ ಎತ್ತರದ ವಧುವಿಗೆ ಮೂರಡಿ ಎತ್ತರದ ವರ: ಹೇಗಿದೆ ನೋಡಿ ಈ ಅಪರೂಪದ ಜೋಡಿ..

ಐದೂವರೆ ಅಡಿ ಎತ್ತರದ ವಧುವಿಗೆ ಮೂರಡಿ ಎತ್ತರದ ವರ: ಹೇಗಿದೆ ನೋಡಿ ಈ ಅಪರೂಪದ ಜೋಡಿ..

spot_img
- Advertisement -
- Advertisement -

ಅಹಮದಾಬಾದ್: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಈ ಜೋಡಿಯನ್ನು ನೋಡಿದ್ರೆ ನಿಜಕ್ಕೂ ಈ ಮಾತು ಸತ್ಯ ಅಂತಾ ಅನ್ನಿಸದೇ ಇರೋದಿಲ್ಲ.

ಹೌದು… ಗುಜರಾತಿನ ಜುನಾಗಢ ನಗರದಲ್ಲಿ ಒಂದು  ವಿಶೇಷವಾದ ಮದುವೆ ನಡೆದಿದೆ. ಇದಕ್ಕೆ ಕಾರಣ 29 ವರ್ಷದ ಮದುಮಗಳು ಶಾಂತಾ 5.5 ಅಡಿ ಎತ್ತರವಿದ್ದರೆ 41 ವಯಸ್ಸಿನ ರಮೇಶ್​ ಮೂರು ಅಡಿ ಇದ್ದಾರೆ. ಇವರಿಬ್ಬರ ಮದುವೆ ನಡೆದಿದೆ.

ಶಾಂತಾ ಹುಟ್ಟು ಅಂಧೆಯಾಗಿದ್ದು ಸೇವಾ ಯುವಕ ಮಂಡಳಿಯ ಯುವತಿಯರ ಹಾಸ್ಟೆಲ್​ನಲ್ಲಿದ್ದರು. ಇವರು ಬಿ.ಎಡ್​ ಪದವೀಧರೆ. ಅವರ ಅಂಧತ್ವ ಕಾರಣದಿಂದ ಮದುವೆಯಾಗಿರಲಿಲ್ಲ. ಶಿಕ್ಷಕರಾಗಿರುವ ರಮೇಶ್​ ಅವರಿಗೆ ವಯಸ್ಸು 40 ದಾಟಿದ್ದರೂ ಅವರ ಎತ್ತರದಿಂದಾಗಿ ಮದುವೆಯಾಗಲಿಲ್ಲ.

ಆದರೆ ಇವರಿಬ್ಬರಿಗೂ ಕಂಕಣ ಯೋಗ ಈಗ ಕಂಕಣ ಕೂಡಿ ಬಂದಿದೆ. ಇದೀಗ ಇವರು ದಂಪತಿಯಾಗಿದ್ದಾರೆ. ಮದುವೆಗೆ ಆಗಮಿಸಿದ ಅತಿಥಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

- Advertisement -
spot_img

Latest News

error: Content is protected !!