Tuesday, April 30, 2024
Homeತಾಜಾ ಸುದ್ದಿವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಮತ್ತೊಂದು ಯೋಜನೆಯ ಭಾಗ್ಯ

ವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಮತ್ತೊಂದು ಯೋಜನೆಯ ಭಾಗ್ಯ

spot_img
- Advertisement -
- Advertisement -

ಬೆಂಗಳೂರು; ವರಮಹಾಲಕ್ಷ್ಮೀ ಹಬ್ಬಕ್ಕೆ ರಾಜ್ಯದ ಮಹಿಳೆಯರಿಗೆ ಮತ್ತೊಂದು ಯೋಜನೆಯ ಭಾಗ್ಯ ಸಿಗಲಿದೆ.ಆಗಸ್ಟ್.25ರ ವರಮಹಾಲಕ್ಷ್ಮೀ ಹಬ್ಬಕ್ಕೆ ಮತ್ತೊಂದು ಭಾಗ್ಯವನ್ನ ಕಲ್ಪಿಸಲಾಗಿದೆ.

ಅದೇ ಮುಜುರಾಯಿ ಇಲಾಖೆಯ ದೇವಾಲಯಗಳಲ್ಲಿ ಅರಿಶಿಣ-ಕುಂಕುಮ ವಿತರಣೆ ಮಾಡೋದಕ್ಕೆ ಆದೇಶಿಸಲಾಗಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಆಗಸ್ಟ್.25ರಂದು ವರಮಹಾಲಕ್ಷ್ಮೀ ವ್ರತದ ಪ್ರಯುಕ್ತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆಗೆ ಸೂಚಿಸಲಾಗಿದೆ.

ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ಶ್ರೀ ವರ ಮಹಾಲಕ್ಷ್ಮೀಯವರ ಕೃಪಾಕಟಾಕ್ಷವು ಲಭಿಸಲೆಂದು ಶ್ರೀ ವರಮಹಾಲಕ್ಷ್ಮೀ ವ್ರತದ ದಿನದಂದು ಅಧಿಸೂಚಿತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ-ಕುಂಕುಮ ಮತ್ತು ಹಸಿರು ಬಳಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತವಾಗಿರುತ್ತದೆ.

ಕಳೆದ ವರ್ಷದಲ್ಲಿ ಆಚರಿಸಿದಂತೆ ದಿನಾಂಕ:25.08.2023ರ ಶುಕ್ರವಾರದಂದು ಬರುವ ಶ್ರೀ ವರ ಮಹಾಲಕ್ಷ್ಮೀ ವ್ರತದ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಲಯಗಳ ವತಿಯಿಂದ ಉತ್ತಮ ಗುಣಮಟ್ಟದ ಕಸ್ತೂರಿ, ಅರಿಶಿಣ- ಕುಂಕುಮ ಮತ್ತು ಹಸಿರು ಬಳೆಗಳನ್ನು ತಂದು ದೇವರ ಮುಂದೆ ಇಟ್ಟು ಪೂಜಿಸಿ, ಗೌರವ ಪೂರ್ವಕವಾಗಿ ಮಹಿಳೆಯರಿಗೆ ನೀಡುವುದು ಹಾಗೂ ಅದರ ವೆಚ್ಚವನ್ನು ಆಯಾಯ ದೇವಸ್ಥಾನದ ನಿಧಿಯಿಂದ ನಿಯಮಾನುಸಾರ ಭರಿಸಲು ತಿಳಿಸಿದೆ.
“ಪುಸಾದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯದ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡುವುದು ಅಂತ ಆದೇಶದಲ್ಲಿ ತಿಳಿಸಿದೆ.

- Advertisement -
spot_img

Latest News

error: Content is protected !!