Sunday, June 7, 2026
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಅಚ್ಚರಿಯ ಆಯ್ಕೆ; ಒಂದೇ ಅವಧಿಯಲ್ಲಿ ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯೆಯಾಗಿದ್ದ...

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಅಚ್ಚರಿಯ ಆಯ್ಕೆ; ಒಂದೇ ಅವಧಿಯಲ್ಲಿ ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯೆಯಾಗಿದ್ದ ಮೂವರಿಗೆ ಟಿಕೆಟ್

- Advertisement -
- Advertisement -

ಮಂಗಳೂರು; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅದರಲ್ಲೂ ಈ ಬಾರಿ ಮೂವರು ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಈ ಮೂವರು ಒಂದೇ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಸದಸ್ಯೆಯಾಗಿದ್ದರು ಅನ್ನೋದು ವಿಶೇಷ.  

ಹೌದು ಪುತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಜಿ.ಪಂ. ಅಧ್ಯಕ್ಷೆಯಾಗಿದ್ದ ವೇಳೆ  ಮಂಗಳೂರು ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಉಪಾಧ್ಯಕ್ಷರಾಗಿದ್ದರು. ಇನ್ನು ಇದೇ ಅವಧಿಯಲ್ಲಿ ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಸದಸ್ಯೆಯಾಗಿದ್ದರು. ಒಂದೇ ಅವಧಿಯಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದ್ದ ಈ ಮೂವರು ಒಂದೇ ಮೂವರು ಜೊತೆಯಾಗಿ ಬಿಜೆಪಿ ಟಿಕೆಟ್ ಪಡೆದಿರೋದು ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!