Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಸೌಜನ್ಯ ಮಾವ ವಿಠಲ್ ಗೌಡ ಪ್ರಕರಣದ...

ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಸೌಜನ್ಯ ಮಾವ ವಿಠಲ್ ಗೌಡ ಪ್ರಕರಣದ ಆರೋಪಿ; ಸ್ಫೋಟಕ ತಿರುವು ನೀಡಿದ ಹೋರಾಟಗಾರ ಸ್ನೇಹಮಯಿ ಕೃಷ್ಣ

- Advertisement -
- Advertisement -

ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದಲ್ಲಿ 2012 ಆ.9 ರಂದು ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಆಕೆಯ ಮಾವ ವಿಠಲ್ ಗೌಡ ಮಾಡಿರುವುದು‌. ವಿಠಲ್ ಗೌಡನನ್ನು ಮಂಪರ್ ಪರೀಕ್ಷೆ ಮಾಡಬೇಕೆಂದು ಸ್ಫೋಟಕ ಹೇಳಿಕೆಯನ್ನು ಸೆ.8 ರಂದು ಬೆಳ್ತಂಗಡಿಯಲ್ಲಿ ಹೇಳಿದ್ದಾರೆ‌‌.

ಇನ್ನು ಈ ಪ್ರಕರಣ ಸಂಬಂಧ ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿದ್ದು ಇದನ್ನು ದ.ಕ‌‌.ಎಸ್ಪಿಗೆ ಹೋಗಿ ದೂರು ಸಲ್ಲಿಸುವುದಾಗಿ ಮಾಧ್ಯಮಗಳಿಗೆ ಸ್ನೇಹ ಮಯಿ ಕೃಷ್ಣ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!