Wednesday, June 3, 2026
Homeತಾಜಾ ಸುದ್ದಿಪರಪ್ಪನ ಅಗ್ರಹಾರ ಜೈಲಿಂದ ಸೂರಜ್ ರೇವಣ್ಣ ಬಿಡುಗಡೆ

ಪರಪ್ಪನ ಅಗ್ರಹಾರ ಜೈಲಿಂದ ಸೂರಜ್ ರೇವಣ್ಣ ಬಿಡುಗಡೆ

- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಂದ ಸೂರಜ್ ರೇವಣ್ಣ ಬಿಡುಗಡೆಯಾಗಿದ್ದಾರೆ. ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಜಾಮೀನು ನೀಡಿತ್ತು. ಅದರ ಬೆನ್ನಲ್ಲೇ ಇವತ್ತು ಸೂರಜ್ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್ ಆಗಿದ್ದಾರೆ.

ಇನ್ನು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸೂರಜ್ ರೇವಣ್ಣ ಇದು ನಮ್ಮ ಕುಟುಂಬದ ವಿರುದ್ಧ ಮಾಡಿದ  ಷಡ್ಯಂತ್ರ . ನಮ್ಮ ಕುಟುಂಬದ ತೇಜೋವಧೆ ಮಾಡಿದ್ದಾರೆ. ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಇದಕ್ಕೆ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ.ಎರಡು ಮೂರು ದಿನದಲ್ಲಿ ಈ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ. ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.

ಇದು ಕೇಸ್ ಅಲ್ಲ ಷಡ್ಯಂತ್ರ ಹಾಗೂ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ ಕಾರು ಚಾಲಕನು ಅಲ್ಲ. ನಮಗೆ ಲೋಕೇಶ್ ಅಂತ ಒಬ್ಬನೇ ಕಾರು ಚಾಲಕ ಇದ್ದಾನೆ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪು ಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ಎಂದು ಸೂರಜ್ ರೇವಣ್ಣ ಹೇಳಿದ್ದಾರೆ.

- Advertisement -

Latest News

error: Content is protected !!