Saturday, June 6, 2026
Homeಅಪರಾಧಹಣದಲ್ಲಿ ಪಾಲು ನೀಡಲಿಲ್ಲವೆಂದು ತಂದೆಯ ಹಣವನ್ನೇ ಕದ್ದ ಮಗ; ಪೋಲಿಸರಿಂದ ಬಂಧನ

ಹಣದಲ್ಲಿ ಪಾಲು ನೀಡಲಿಲ್ಲವೆಂದು ತಂದೆಯ ಹಣವನ್ನೇ ಕದ್ದ ಮಗ; ಪೋಲಿಸರಿಂದ ಬಂಧನ

- Advertisement -
- Advertisement -

ಹಾಸನ: ಜಮೀನು ಸ್ವಾಧೀನಕ್ಕೆ ಪರಿಹಾರವಾಗಿ ಬಂದ ಹಣದಲ್ಲಿ ತನಗೆ ಪಾಲು ನೀಡುವುದಿಲ್ಲವೆಂದು ತಂದೆ ಬೀರುವಿನಲ್ಲಿಟ್ಟಿದ್ದ 713.20 ಲಕ್ಷ ನಗದು ಕಳವು ಮಾಡಿದ್ದ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.


ಶಾಂತಿಗ್ರಾಮ ಹೋಬಳಿ ದೊಡ್ಡಾಲದಹಳ್ಳಿಯ ರಂಗಸ್ವಾಮಿ ಅವರ 14 ಗುಂಟೆ ಜಮೀನು ಯಗಚಿ ನಾಲೆಗೆ ಸ್ವಾಧೀನವಾಗಿದ್ದು, ಅದರ ಪರಿಹಾರವಾಗಿ ಸರ್ಕಾರ ನೀಡಿದ್ದ ಕೆ 13.20 ಲಕ್ಷ ನಗದನ್ನು ಏ.23 ರಂದು ಕೌಶಿಕ ಗ್ರಾಮದ ಕರ್ನಾಟಕ ಬ್ಯಾಂಕ್‌ನಿಂದ ತಂದು ಮನೆಯ ಬೀರುವಿನಲ್ಲಿಟ್ಟು, ಬೀಗ ಹಾಕಿಕೊಂಡು ದನಗಳನ್ನು ಮೇಯಿಸಲು ಗ್ರಾಮದ ಕೆರೆಯ ಬಳಿಗೆ ತೆರಳಿದ್ದರು.


ಆ ವೇಳೆ ಕೊಟ್ಟಿಗೆಯ ಬೀಗ ಮುರಿದು ಒಳ ಪ್ರವೇಶಿಸಿ ಹಣ ಕಳವು ಮಾಡಿದ್ದ ರಂಗಸ್ವಾಮಿ ಪುತ್ರ ರಾಜಘಟ್ಟ ನಿವಾಸಿ ರಂಗನಾಥನನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

- Advertisement -

Latest News

error: Content is protected !!