Saturday, June 6, 2026
Homeಕರಾವಳಿಬೆಳ್ತಂಗಡಿ: ಮಾವನಿಗೆ ಸ್ಕೂಟರ್ ನಿಂದ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಅಳಿಯ

ಬೆಳ್ತಂಗಡಿ: ಮಾವನಿಗೆ ಸ್ಕೂಟರ್ ನಿಂದ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಅಳಿಯ

- Advertisement -
- Advertisement -

ಬೆಳ್ತಂಗಡಿ: ಮಾವನಿಗೆ ಸ್ಕೂಟರ್ ನಿಂದ ಡಿಕ್ಕಿ ಹೊಡೆಸಿ ಅಳಿಯನಬ್ಬ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ಎಂಬಲ್ಲಿ ಕೇಳಿ ಬಂದಿದೆ.ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ನಿವಾಸಿ ನಿವಾಸಿ ಕೆ.ಎಚ್‌. ಇಬ್ರಾಹಿಂ (60) ಗಾಯಗೊಂಡವರು.

ಇಬ್ರಾಹಿಂ ಅವರ ಪುತ್ರಿ ಗಂಡ ಮಹಮ್ಮದ್‌ ಶಾಫಿ ಅಪಘಾತಗೊಳಿಸಿದಾತ. ಇಬ್ರಾಹಿಂ ಅವರ ಮಗಳು ಮತ್ತು ಅಳಿಯನ ಮಧ್ಯೆ ಕೌಟುಂಬಿಕ ಸಮಸ್ಯೆ ಇತ್ತು ಎನ್ನಲಾಗಿದೆ.  ಅಳಿಯ ಖರ್ಚಿಗೆ ಹಣವೂ ನೀಡುತ್ತಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅವರನ್ನು ಪರಸ್ಪರ ಸರಿ ಮಾಡಲು ತಂದೆ ಪ್ರಯತ್ನ ನಡೆಸುತ್ತಲೇ ಬಂದಿದ್ದರು ಎನ್ನಲಾಗಿದೆ. ಇದೇ ದ್ವೇಷದಿಂದ ಇಬ್ರಾಹಿಂ ಅವರು ನಡೆದುಕೊಂಡು ಹೋಗುತ್ತಿದ್ದಾಗ ಅಳಿಯ ಮಹಮ್ಮದ್‌ ಶಾಫಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆಸಿ ಕೊಲೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಇಬ್ರಾಹಿಂ ಅವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಮುಹಮ್ಮದ್‌ ರಫೀಕ್‌ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!