Thursday, June 4, 2026
Homeಕರಾವಳಿಉಡುಪಿಉಡುಪಿ; ಹಾವು ಕಡಿದು ಮಹಿಳೆ ಸಾವು

ಉಡುಪಿ; ಹಾವು ಕಡಿದು ಮಹಿಳೆ ಸಾವು

- Advertisement -
- Advertisement -

ಉಡುಪಿ;  ಹಾವು ಕಚ್ಚಿದ ಪರಿಣಾಮ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಬೆಳ್ವೆ ಗ್ರಾಮದ ಸೂರಜೆಡ್ಡು ಗುಮ್ಮಲ ಎಂಬಲ್ಲಿ ನಡೆದಿದೆ.ಸೂರಜೆಡ್ಡು ನಿವಾಸಿ ರಾಧ ನಾಯ್ಕ(67) ಮೃತ ದುರ್ದೈವಿ.

ಇವರು ಮಾ.11ರಂದು ಕೃಷ್ಣ ನಾಯ್ಕ ಎಂಬವರ ಮನೆಗೆ ಕೃಷಿ ಕೆಲಸ ಮಾಡಲು ಹೋಗಿದ್ದು, ಅಲ್ಲಿ ಹಾಡಿಯಲ್ಲಿ ದರಲೆಯನ್ನು ಗುಡಿಸುತ್ತಿರುವಾಗ ಅವರ ಕೈಗೆ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ.

ಈ ಬಗ್ಗೆ ನಾಟಿ ಚಿಕಿತ್ಸೆ ಪಡೆದಿದ್ದು, ಸರಿಯಾಗಿ ಗುಣವಾಗದೆ ಕಾರಣ ಮಾ.25 ರಂದು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಾ.27ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಎ.2ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!